ಬೆಂಗಳೂರು: ವಾಹನಗಳಿಗೆ ಅತೀಭದ್ರತೆ ನಾಮಫಲಕ(ಎಚ್‌ಎಸ್‌ಆರ್‌ಪಿ) ಅಳವಡಿಸಲು ಇದ್ದ ಗಡುವನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಿಸಿದೆ. ನ. ೨೦ರವರೆಗೆ ಇದ್ದ ಅವಧಿಯನ್ನು ನ. ೩೦ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಇನ್ನು ಲಕ್ಷಗಟ್ಟಲೇ ವಾಹನಗಳು ನಾಮಫಲಕ ಅಳವಡಿಸಿಕೊಳ್ಳಬೇಕಿರುವುದರಿಂದ ಅವಧಿ ವಿಸ್ತರಣೆ ಮಾಡಿದೆ ಎಂದು ತಿಳಿದು ಬಂದಿದೆ. ಸರ್ಕಾರ ಇಲ್ಲಿವರೆಗೂ ೪ ಬಾರಿ ಅವಧಿ ವಿಸ್ತರಣೆ ಮಾಡಿದೆ. ಅತೀ ಭದ್ರತೆ ನಾಮ ಫಲಕ ಅಳವಡಿಕೆಗೆ ಈಗಾಗಲೇ ಅವಧಿ ಮುಗಿದಿದ್ದರೂ ಸಹ ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಬಂದಿದೆ. ಬರೋಬ್ಬರಿ ನಾಲ್ಕು ಬಾರಿ ಗಡುವು ವಿಸ್ತರಿಸಿದೆ.