ಆಂಟಿಬಯೋಟಿಕ್ ಪಡೆಯಲು ವೈದ್ಯರ ಸಲಹೆ ಕಡ್ಡಾಯ

0
46

ಕೊಪ್ಪಳ: ಆಂಟಿಬಯೋಟಿಕ್ ಔಷಧ ಪಡೆಯಲು ಸಾರ್ವಜನಿಕರು ವೈದ್ಯರ ಸಲಹೆ ಚೀಟಿ ಕಡ್ಡಾಯವಾಗಿ ಪಡೆಯಬೇಕು ಎಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಣಾಧಿಕಾರಿ ವೆಂಕಟೇಶ ರಾಠೋಡ್ ಹೇಳಿದರು.
ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಆಶ್ರಯದಲ್ಲಿ ಔಷಧ ವ್ಯಾಪಾರಿಗಳಿಗೆ ವಿವಿಧ ಔಷಧಗಳ ಬಳಕೆ ಕುರಿತ ಫೋಸ್ಟರ್ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ವೈದ್ಯರು ಸೂಚಿಸಿದ ಆಂಟಿಬಯೋಟಿಕ್ ಔಷಧವನ್ನು ಸಂಪೂರ್ಣವಾಗಿ ಉಪಯೋಗಿಸಬೇಕು. ಹಳೆಯ ಸಲಹೆ ಚೀಟಿಯಿಂದ ಔಷಧಗಳನ್ನು ಬಳಸಬೇಡಿ. ಸ್ವಯಂ ಔಷಧೋಪಚಾರ ಮಾಡಬೇಡಿ. ನಿಯಮಿತವಾಗಿ ಕೈಗಳನ್ನು ತೊಳೆಯಿರಿ. ನಿಮ್ಮ ಪರಿಸರವನ್ನು ಸ್ವಚ್ಛವಾಗಿಡಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೊಟ್ರಪ್ಪ ಕೊರ್ಲಳ್ಳಿ, ತಾಲೂಕಾಧ್ಯಕ್ಷ ಹನುಮೇಶ ಇಲ್ಲೂರು, ಸುರೇಂದ್ರ ಪಾಟೀಲ್, ಅರುಣ್, ವೆಂಕಟೇಶ ವೇಮಲಿ, ಕೃಷ್ಣ ಪಾನಘಂಟಿ, ಆನಂದ ರಾಟಿ ಇದ್ದರು.

Previous articleಕೂಡಲಸಂಗಮದಲ್ಲಿ ಸಾವಿರ ಸಂತರ ಸಮಾವೇಶ
Next articleಪಕ್ಷದ ಹಿತದೃಷ್ಟಿಯಿಂದ ವರಿಷ್ಠರ ತೀರ್ಮಾನಕ್ಕೆ ತಲೆಬಾಗಿದ್ದೇನೆ