ಬೆದರಿಕೆಗೆ ಹೆದರೋಲ್ಲ, ಹಿಂದುತ್ವದ ವೃತ ನಿರಂತರ: ಮುತಾಲಿಕ್‌

0
13
ಮುತಾಲಿಕ್‌


ಯಾವ ಜೀವ ಬೆದರಿಕೆ ಕರೆಗಳಿಗೂ ಹೆದರೋ ಜಾಯಮಾನ ನನ್ನದಲ್ಲ. ಇದೇನು ಹೊಸದಲ್ಲ. ಹಿಂದುತ್ವದ ವೃತ ನಿರಂತರವಾಗಿ ನಡೆಯುತ್ತಿರುತ್ತದೆ. ಶ್ರೀರಾಮಸೇನೆಯ ಸಂಘಟನೆಯ ಕಾರ್ಯಗಳು ನಿಲ್ಲಿಸುವ ಹುನ್ನಾರ ಯಾರಿಂದಲೂ ಸಾಧ್ಯವಿಲ್ಲವೆಂದು ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು.
ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯದಲ್ಲಿ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧೆ ನಿಶ್ಚಿತವೆಂದು ಮುತಾಲಿಕ್ ಸ್ಪಷ್ಟಪಡಿಸಿದರು. ರಾಜ್ಯದ ತೇರದಾಳ, ಪುತ್ತೂರು, ಕಾರ್ಕಳ, ಧಾರವಾಡ, ಹಳಿಯಾಳ, ಜಮಖಂಡಿ ಸೇರಿದಂತೆ 8-10 ಕಡೆಗಳಿಂದ ಕಾರ್ಯಕರ್ತರ ಹಾಗು ಮತದಾರರ ಒತ್ತಾಯವಾಗಿದ್ದು, ಬಿಜೆಪಿಯಿಂದ ಭಿಕ್ಷೆ ಬೇಡುವ ಪ್ರಮೇಯವಿಲ್ಲ. ಮುತಾಲಿಕ್ ಏಕಾಂಗಿಯಾಗಿ ಕಾರ್ಯಕರ್ತರ ವಿಶ್ವಾಸದೊಂದಿಗೆ ಚುನಾವಣೆ ನಿಂತು ಗೆದ್ದು, ಬಿಜೆಪಿಗೇ ಬೆಂಬಲಿಸಿ, ಬಿಜೆಪಿಯಲ್ಲಿ ದಾರಿ ತಪ್ಪಿದವರನ್ನು ತಿದ್ದುವ ಕಾರ್ಯ ನಡೆಯುವುದು, ವಿಮುಖವಾಗಿರುವ ಬಿಜೆಪಿಯನ್ನು ಒಗ್ಗೂಡಿಸುವ ಕಾರ್ಯ ನಡೆಸಲಾಗುವದು. ಅಲ್ಲದೆ ರಾಜ್ಯದ 25 ಕಡೆಗಳಲ್ಲಿ ಸಂಘಟನೆಯ ಮುಖಂಡರು ಸ್ಪರ್ಧೆಗೆ ತಯಾರಿ ನಡೆಸಿದ್ದು, ಇವರು ಯಾರು ಬಿಜೆಪಿಯಿಂದ ಸ್ಪರ್ಧೆ ನಡೆಸೋಲ್ಲ ಬದಲಾಗಿ ಪಕ್ಷೇತರರಾಗಿಯೇ ಕಣಕ್ಕಿಳಿಯುವದು ನಿಶ್ಚಿತವೆಂದರು.

Previous articleಉಭಯ ರಾಜ್ಯಗಳ ಬಾಂಧವ್ಯ ವೃದ್ಧಿಗೆ ಸಮನ್ವಯ ಸಭೆ ಸಹಕಾರಿ
Next articleಅಲೋಕ ಕುಲಕರ್ಣಿಗೆ ಲಂಡನ್‌ನಲ್ಲಿ `ಎಂಆರ್‌ಸಿಪಿ’ ಪದವಿ