ವರಮಾನ ಸಂಗ್ರಹಕ್ಕೆ ನಾನಾ ಮಾರ್ಗ ಹುಡುಕಾಟ

0
34

ಬೆಂಗಳೂರು: ಅವೈಜ್ಞಾನಿಕ ಗ್ಯಾರೆಂಟಿಗಳು, ಬ್ರಹ್ಮಾಂಡ ಭ್ರಷ್ಟಾಚಾರದಿಂದ ಅಕ್ಷರಶಃ ಪಾಪರ್ ಆಗಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ವರಮಾನ ಸಂಗ್ರಹಕ್ಕೆ ನಾನಾ ಮಾರ್ಗಗಳನ್ನ ಹುಡುಕಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಂಪನ್ಮೂಲ ಕ್ರೋಢೀಕರಣಕ್ಕೆ ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG) ಎಂಬ ವಿದೇಶಿ ಕಂಪನಿಗೆ ಹತ್ತಾರು ಕೋಟಿ ಸಂಭಾವನೆ ಕೊಟ್ಟು ಈಗಾಗಲೇ ಪ್ರಾಥಮಿಕ ವರದಿ ಪಡೆದಿರುವ ಕಾಂಗ್ರೆಸ್ ಸರ್ಕಾರ, ಈಗ ಮತ್ತೊಂದು ತಜ್ಞರ ಸಮಿತಿ ನೇಮಕ ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ, ‘ಕೂತು ತಿನ್ನುವವನಿಗೆ ಕುಡಿಕೆ ಹೊನ್ನೂ ಸಾಲದು’ ಎಂಬಂತೆ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ತಾನಾಗಿಯೇ ಸಂಪನ್ಮೂಲ ಕ್ರೂಢೀಕರಣ ಹೆಚ್ಚಳ ಆಗಬೇಕು ಅಂದರೆ ಅದು ಹೇಗೆ ಸಾಧ್ಯ?
ಮೂಲಸೌಕರ್ಯ ವೃದ್ಧಿಸಿ, ಬಂಡವಾಳ ಹೂಡಿಕೆಗೆ ಸೂಕ್ತ ವಾತಾವರಣ ನಿರ್ಮಿಸಿ, ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿದರೆ ಸರ್ಕಾರದ ವರಮಾನ ತಾನಾಗಿಯೇ ಹೆಚ್ಚಳ ಆಗುತ್ತದೆ. 15 ಬಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ತಮಗೆ ಇಷ್ಟಾದರೂ ಸಾಮಾನ್ಯ ಜ್ಞಾನ ಇರಬೇಕಲ್ಲವೇ? ಕುರ್ಚಿ ಉಳಿಸಿಕೊಳ್ಳಲು ದಿನದ 24 ಗಂಟೆಯೂ, ವರ್ಷದ 365 ದಿನವೂ ಬರೀ ರಾಜಕೀಯದಲ್ಲಿ ಮಾಡಿಕೊಂಡು ಕಾಲಹರಣ ಮಾಡಿದರೆ ರಾಜ್ಯದ ಪ್ರಗತಿಯೂ ಆಗುವುದಿಲ್ಲ, ಸರ್ಕಾರದ ಆದಾಯವೂ ಹೆಚ್ಚಳ ಆಗುವುದಿಲ್ಲ. ವಿದೇಶಿ ಕಂಪನಿಗಳಿಗೆ, ತಜ್ಞರ ಸಮಿತಿಗಳಿಗೆ ಹತ್ತಾರು ಕೋಟಿ ಖರ್ಚು ಮಾಡಿ ಸಾರ್ವಜನಿಕರ ಹಣ ಪೋಲು ಮಾಡುವ ಬದಲು ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಿ. ನಿಮ್ಮ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದಿದ್ದಾರೆ

Previous articleಕಲ್ಯಾಣ ಕರ್ನಾಟಕ ಭಾಗಕ್ಕೆ ನಿಪುಣ ಕರ್ನಾಟಕ ಯೋಜನೆ
Next article136 ಜನಾನೂ ಸಿಎಂ ಆಗೋಕೆ ರೆಡಿ