ಇಳಕಲ್: ಪಂಚಮಸಾಲಿ ಸಮಾಜಕ್ಕೆ ಟು ಬಿ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಎಲ್ಲಾ ಪಂಚಮಸಾಲಿ ಶಾಸಕರು ಈ ಬಗ್ಗೆ ವಿಧಾನಸಭಾ ಅಧ್ಯಕ್ಷರಿಗೆ ಪತ್ರ ಬರೆದು ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕೇಳಿದರೂ ಸಭಾಧ್ಯಕ್ಷರು ಕೊಡಲಿಲ್ಲ. ಇದು ನಮಗಾದ ಅವಮಾನ ಎಂದು ತಿಳಿದು ಸ್ವಾಭಿಮಾನದ ಹೋರಾಟವನ್ನು ಪಂಚಮಸಾಲಿ ಶಾಸಕರು ಮಾಡಬೇಕಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಪಂಚಮಸಾಲಿ ವಕೀಲರನ್ನು ಸೇರಿಸಿ ಒಂದು ಬೃಹತ್ ಸಮ್ಮೇಳನ ನಡೆಸಿ ಅದರ ಮೂಲಕ ಸರಕಾರದ ಮೇಲೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ಪ್ರಯತ್ನ ಸಹ ಈಗಾಗಲೇ ನಡೆದಿದ್ದು ವಕೀಲರ ಸಂಘಟನೆಯನ್ನು ಜಿಲ್ಲೆ ಜಿಲ್ಲೆ ತಿರುಗಾಡಿ ಮಾಡಲಾಗುತ್ತಿದೆ ಪಂಚಮಸಾಲಿಗಳಿಗೆ ನ್ಯಾಯ ಸಿಗುವವರೆಗೆ ಈ ಹೋರಾಟ ನಿಲ್ಲುವದೇ ಇಲ್ಲ ಎಂದವರು ಸ್ಪಷ್ಟ ಪಡಿಸಿದರು ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತೇಶ ಪಾಟೀಲ ಜಿಎಂಇ ಉಪಸ್ಥಿತರಿದ್ದರು.