ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದವತಿಯಿಂದ ನಡೆಸಲಾಗುವ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯನ್ನು ಮುಂದುಡುವಂತೆ ರಾಜ್ಯ ಕರ್ನಾಟಕ ವಿದ್ಯಾರ್ಥಿಗಳ ಸಂಘ ಆಗ್ರಹಿಸಿದೆ.
ಆಗಸ್ಟ್ 25ರಂದು IBPS ಕೇಂದ್ರ ಸರ್ಕಾರದ ಪರೀಕ್ಷೆ ನಿಗದಿಯಾಗಿದೆ ಪರೀಕ್ಷೆ ಕನ್ನಡದಲ್ಲಿ ನಡೆಸುವುದರಿಂದ ಸಾವಿರಾರು ಕರ್ನಾಟಕದ ಅಭ್ಯರ್ಥಿಗಳು ಭಾಗವಹಿಸುತ್ತಾರೆ ಅಂದೇ ನಿಗದಿಯಾಗಿರುವ KAS ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ವಿನಂತಿಸಿಕೊಳ್ಳುತ್ತೇವೆ ನಮ್ಮ ನಾಡಿನ ವಿದ್ಯಾರ್ಥಿಗಳು ಯಾವ ಪರೀಕ್ಷೆಯಿಂದಲೂ ವಂಚಿತರಾಗಬಾರದು ಎಂದಿದ್ದಾರೆ.