ಬಳ್ಳಾರಿ: ತುಂಗಭದ್ರಾ ಜಲಾಶಯದ ಹೊರ ಹರಿವಿನ ಪ್ರಮಾಣ ೧ ಲಕ್ಷ ೭ ಸಾವಿರ ಕ್ಯೂಸೆಕ್ ದಾಟಿದ್ದು, ಕಂಪ್ಲಿ-ಗಂಗಾವತಿ ಮಾರ್ಗದ ಸಂಚಾರ ಬಂದ್ ಮಾಡಲಾಗಿದೆ.
ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದ್ದು ಒಳ ಹರಿವಿನ ಪ್ರಮಾಣ ೯೦ಸಾವಿರ ಕ್ಯೂಸೆಕ್ ದಾಟಿದೆ. ಜಲಾಶಯದ ಸಾಮಥ್ಯ ೯ ೧೦೫ ಟಿಎಂಸಿ ಭರ್ತಿಯಾಗಿ ಹೊರ ಹರಿವು ಹೆಚ್ಚಿಸಲಾಗಿದೆ. ಜಲಾಶಯದ ೩೦ ಗೇಟ್ ಗಳ ಮೂಲಕ ೧ ಲಕ್ಷ ಕ್ಯೂಸೆಕ್ ಮೀರಿ ನದಿಗೆ ಹೊರ ಹರಿವು ಬಿಟ್ಟರೇ ಕಂಪ್ಲಿ ಬಳಿಯ ಸೇತುವೆ ಮುಳುಗಡೆಯಾಗಲಿದೆ. ಹೀಗಾಗಿ ಈ ಮಾರ್ಗದ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪರ್ಯಾಯವಾಗಿ ಗಂಗಾವತಿ ತಾಲೂಕಿನ ಬುಕ್ಕಸಾಗರ ಸೇತುವೆ ಮೇಲಿಂದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಂಪ್ಲಿ ಸೇತುವೆಗೆ ಅಧಿಕ ನೀರು ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ ಮಿಶ್ರ, ಕಂಪ್ಲಿ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು. ಅತ್ತ ಕೊಪ್ಪಳ ಜಿಲ್ಲಾಡಳಿತದ ಅಧಿಕಾರಿಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.