ವಿರಾಟ್ ಕೊಹ್ಲಿ ನನ್ನ ಸಂಬಂಧ ಟಿಆರ್‌ಪಿಗಾಗಿ ಅಲ್ಲ

0
50

ಮುಂಬೈ: ವಿರಾಟ್ ಕೊಹ್ಲಿ ಹಾಗೂ ನನ್ನ ನಡುವಿನ ಸಂಬಂಧ ಟಿಆರ್‌ಪಿಗಳಿಗಾಗಿ ಅಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಸಂಬಂಧವು ನಮ್ಮಿಬ್ಬರ ನಡುವಿನ ಸಂಬಂಧವಾಗಿದೆ ಮತ್ತು ಅದು ಟಿಆರ್‌ಪಿಗಳಿಗಾಗಿ ಅಲ್ಲ, ನನ್ನ ಹಾಗೂ ವಿರಾಟ್ ಕೊಹ್ಲಿ ನಡುವೆ ಸಂಬಂಧ ಸರಿಯಿಲ್ಲ ಎಂಬುದು ಕೇವಲ ವದಂತಿಗಳು ಅಷ್ಟೇ. ಇದೆಲ್ಲಾ ಟಿಆರ್​ಪಿಗಾಗಿ ಒಳ್ಳೆಯದು. ಆದರೆ ನನ್ನ ಹಾಗೂ ಕೊಹ್ಲಿ ನಡುವೆ ಉತ್ತಮ ಸಂಬಂಧವಿದೆ. ನಾವಿಬ್ಬರೂ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೇವೆ ಎಂದರು. ಕೊಹ್ಲಿ-ರೋಹಿತ್ ಉತ್ತಮ ಫಿಟ್​ನೆಸ್ ಉಳಿಸಿಕೊಂಡರೆ 2027ರ ಏಕದಿನ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಬಹುದು ಎಂದರು.

Previous articleಅಂದು ಏಕಾಂಗಿಯಾಗಿ ನಿಂತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು…
Next articleದೇಶದ ಮೊಟ್ಟ ಮೊದಲ ಸರ್ಕಾರಿ ಮಾಂಟೆಸ್ಸರಿ ಆರಂಭ