ಒಡಿಶಾ : ದಿನನಿತ್ಯದ ಜಂಜಾಟದಲ್ಲಿ ನಾವು ಪ್ರಕೃತಿ ಮಾತೆಯೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುತ್ತೇವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.
ಒಡಿಶಾ ಪ್ರವಾಸದಲ್ಲಿರುವ ಅವರು ವಿಹಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನಾನು ಕಡಲ ತಿರದ ಉದ್ದಕ್ಕೂ ನಡೆದುಕೊಂಡು ಹೋಗುತ್ತಿರುವಾಗ, ಸುತ್ತಮುತ್ತಲಿನ ಪರಿಸರದೊಂದಿಗೆ ನಾನು ಸಂವಹನವನ್ನು ಅನುಭವಿಸಿದೆ – ಸೌಮ್ಯವಾದ ಗಾಳಿ, ಅಲೆಗಳ ಘರ್ಜನೆ , ಜೀವನದ ಸಾರದೊಂದಿಗೆ ನಮ್ಮನ್ನು ಹತ್ತಿರಕ್ಕೆ ತರುವ ಮತ್ತು ನಾವು ಪ್ರಕೃತಿಯ ಭಾಗವೆಂದು ನೆನಪಿಸುವ ಸ್ಥಳಗಳಾಗಿವೆ ಪರ್ವತಗಳು, ಕಾಡುಗಳು, ನದಿಗಳು ಮತ್ತು ಕಡಲತೀರಗಳು ನಮ್ಮೊಳಗೆ ಆಳವಾದದ್ದನ್ನು ಆಕರ್ಷಿಸುತ್ತವೆ ಎಂದಿದ್ದಾರೆ.