ಬಾಗಲಕೋಟೆ: ಬಾಗಲಕೋಟೆಯಲ್ಲಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಮಖಂಡಿ ಮೂಲದ ಆನಂದಭಾರತ ಎಂಬ ಮೋದಿ ಅಭಿಮಾನಿ ವಿಶೇಷ ಉಡುಗೊರೆ ನೀಡಲಿದ್ದಾರೆ.
ಆನಂದಭಾರತ ಅವರು ತಮ್ಮ ರಕ್ತದಲ್ಲಿ ತಾಯಿ ಹೀರಾಬೆನ್ ಪುತ್ರ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಮಾಡುತ್ತಿರುವ ಭಾವಚಿತ್ರ ಬಿಡಿಸಿದ್ದಾರೆ. ಇದನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ. ಆನಂದಭಾರತ ಈ ಹಿಂದೆ ಅನೇಕ ಮಹನೀಯರ ಭಾವಚಿತ್ರ ಬಿಡಿಸಿದ್ದಾರೆ.