ಮಾಲಿಕನ ಸಮಾಧಿ ಮೇಲೆ ರೋಧಿಸಿದ ಸಾಕುನಾಯಿ

0
10

ಇಳಕಲ್: ಸಾಕಿದ ನಾಯಿಯೊಂದು ತನ್ನ ಮಾಲಿಕನ ಸಮಾಧಿಯ ಮೇಲೆ ರೋಧಿಸುತ್ತ ಮಲಗಿದ ಘಟನೆ ಇಲ್ಲಿನ ಸ್ಮಶಾನದಲ್ಲಿ ನಡೆದಿದ್ದು, ನಾಯಿಯ ನಿಯತ್ತು ಚರ್ಚೆಗೆ ಗ್ರಾಸವಾಗಿದೆ.
ಕಟ್ಟಿಗೆ ಅಡ್ಡೆಯ ಮಾಲಿಕ ಮಹಾಂತಪ್ಪ ಚಿನ್ನಾಪೂರ ಮಂಗಳವಾರ ನಿಧನ ಹೊಂದಿದ್ದರು. ಅವರ ಅಂತ್ಯಕ್ರಿಯೆ ಸಂಜೆ ನಡೆಯಿತು. ಅಂತ್ಯಕ್ರಿಯೆ ಮುಗಿಸಿ ಜನರು ಮನೆಗೆ ಮರಳಿದ ನಂತರ ಅವರ ಸಾಕುನಾಯಿ ಸ್ಮಶಾನಕ್ಕೆ ಹೋಗಿದೆ. ಅದು ಅಲ್ಲಿ ತನ್ನ ಮಾಲಿಕನ ಸಮಾಧಿಯನ್ನು ಕೆಬರಿ ಅದರ ಮೇಲೆ ರೋಧಿಸುತ್ತ ಮಲಗಿದೆ. ನಂತರ ಸ್ಮಶಾನಕ್ಕೆ ಹೋದ ಜನರು ಈ ದೃಶ್ಯ ನೋಡಿ ನಾಯಿಯ ನಿಯತ್ತನ್ನು ಕೊಂಡಾಡಿದ್ದಾರೆ.

Previous articleನೇಹಾ ಪ್ರಕರಣ: ಸಿಎಂ ಸಾಂತ್ವನದ ಡ್ರಾಮಾ
Next articleದಕ್ಷಿಣದ ಜಿಲ್ಲೆಗಳಿಗೆ ಕೃಷ್ಣೆ ನೀರು: ಎಚ್‌ಡಿಡಿ ಹೇಳಿಕೆಗೆ ಎಸ್ಸಾರ್ ನಿಗಿ ಕೆಂಡ..!