6 ವಿಭಿನ್ನ ಸೇವೆ, ನೂರಾರು ನಗು: ನಂದಗಡದ ವಿಶೇಷ

0
15

ಬೆಂಗಳೂರು: ಬೆಳಗಾವಿ ಜಿಲ್ಲೆಯ ನಂದಗಡಲ್ಲಿ 6 ವಿಭಿನ್ನ ಸೇವೆ ಒದಗಿಸುವ ಮೂಲಕ ನೂರಾರು ಜನರಲ್ಲಿ ಮಂದಹಾಸ ಮೂಡಿಸಿದೆ ಇದ ನಂದಗಡದ ವಿಶೇಷ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ನಂದಗಡದ ವಿಶೇಷ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮನಾದ ಊರು ಬೆಳಗಾವಿಯ ನಂದಗಡ. ಒಂದು ಪಂಚಾಯತಿ, ಆರು ಸೇವೆ ಮತ್ತು ನೂರಾರು ನಗು ನಂದಗಡದ ವಿಶೇಷ.
ಇಲ್ಲಿನ ಗ್ರಾಮ ಪಂಚಾಯತಿಯ ಒಂದೇ ಆವರಣವು 6 ವಿಭಿನ್ನ ಸೇವೆಗಳನ್ನು ಗ್ರಾಮದ ಜನತೆಗೆ ಒದಗಿಸುವ ಮೂಲಕ ಜನಸ್ನೇಹಿಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ರಾಜೀವ್ ಗಾಂಧಿ ಸೇವಾ ಕೇಂದ್ರ, ಡಿಜಿಟಲ್ ಗ್ರಂಥಾಲಯ, ಬಾಪೂಜಿ ಸೇವಾಕೇಂದ್ರ, ಮಕ್ಕಳ ಆಟದ ಮೈದಾನ, ಉದ್ಯಾನವನದ ಮೂಲಕ ಈ ಆವರಣವು ಗ್ರಾಮದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದಿದ್ದಾರೆ.

Previous articleಸಂಸದ ಬಿ.ಎನ್‌. ಬಚ್ಚೇಗೌಡ ಬಿಜೆಪಿಗೆ ರಾಜೀನಾಮೆ
Next articleಸದಾನಂದ ಗೌಡರ ತುರ್ತು ಪತ್ರಿಕಾಗೋಷ್ಠಿ: ಬಿಜೆಪಿ ಪಕ್ಷ ಶುದ್ದೀಕರಣ ಮಾಡುವತ್ತ ಗಮನ