ಎಚ್‌ಡಿಕೆಗೆ ಇಂದು ಶಸ್ತ್ರಚಿಕಿತ್ಸೆ

0
22

ಬೆಂಗಳೂರು: ಶಸ್ತ್ರ ಚಿಕಿತ್ಸೆಗಾಗಿ ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಲವು ಪರೀಕ್ಷೆಗಳನ್ನು ನಡೆಸಿರುವ ವೈದ್ಯರು, ಗುರುವಾರ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಅಮೆರಿಕದ ಪರಿಣತ ವೈದ್ಯರು ಕುಮಾರಸ್ವಾಮಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಚಿಕಿತ್ಸೆ ನಂತರ ಐದು ದಿನ ವಿಶ್ರಾಂತಿ ಪಡೆಯಲಿರುವ ಅವರು, ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರೇ ನಿನ್ನೆ ಮಾಹಿತಿ ನೀಡಿ ಹೃದಯ ಸಂಬಂಧಿ ಸಮಸ್ಯೆಯಿದೆ. ಈಗಾಗಲೇ ೨ ಬಾರಿ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದೇನೆ. ಬಿಡುವಿಲ್ಲದ ಓಡಾಟ, ರಾಜಕೀಯ ಜೀವನದ ಶೈಲಿಯಿಂದಾಗಿ ಸಮಸ್ಯೆ ಉಂಟಾಗಿದೆ. ಈ ಬಾರಿ ಉನ್ನತ ಮಟ್ಟದ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದಿದ್ದಾರೆ.

Previous articleಶೇಷನ್ ಮತ್ತೊಮ್ಮೆ ಹುಟ್ಟಿ ಬಾ…
Next article೫ ಕಡೆ ರಾಹುಲ್ ರ‍್ಯಾಲಿ