ರೈಲು ಹಳಿ ಛಿದ್ರ, ನೆಲಕ್ಕುರುಳಿದ ಗೂಡ್ಸ್

0
15

ವಾಡಿ: ಭಾರ ತಾಳಲಾರದೇ ರೈಲು ಹಳಿ ಛಿದ್ರಗೊಂಡು ಗೂಡ್ಸ್ ಗಾಡಿ ನೆಲಕ್ಕುರುಳಿದ ಘಟನೆ ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ 8 ಗಂಟೆಗೆ ಜರುಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಿಕಂದ್ರಾಬಾದನಿಂದ ವಾಡಿ ಪಟ್ಟಣದ ಗೂಡ್ಸ್ ಯಾರ್ಡ್‌ಗೆ ಕಲ್ಲು ಹೊತ್ತುಕೊಂಡು ಬರುತ್ತಿದ್ದ ಗೂಡ್ಸ್ ಟ್ರೈನ್‌ನ ಭಾರ ತಾಳದೇ ಹಳಿಗಳು ಸೀಳಿದ್ದರಿಂದ ಏಕಾಏಕಿ ದೊಡ್ಡ ಸದ್ದಿನೊಂದಿಗೆ 5 ಬೋಗಿಗಳು ನೆಲಕ್ಕೆ ಬಿದ್ದಿವೆ. ರೈಲು ನಿಲ್ದಾಣದ ಕ್ಯಾಂಟೀನ್ ಹತ್ತಿರವೇ ಈ ದುರ್ಘಟನೆ ಜರುಗಿದ್ದು ಸದ್ದಿಗೆ ಸುತ್ತಲೂ ಹಾಗೂ ರೈಲು ನಿಲ್ದಾಣದಲ್ಲಿ ಇದ್ದ ಜನರು ಗಾಬರಿಗೊಂಡರು. ಈ ಘಟನೆ ರೈಲು ಹಳಿಗಳ ನಿರ್ವಹಣೆ ಮೇಲೆ ಪ್ರಶ್ನೆಗಳು ಹುಟ್ಟುವಂತೆ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದೊಡ್ಡ ಕ್ರೇನ್‌ಗಳ ಸಹಾಯದಿಂದ ಹಳಿಗಳ ಮೇಲಿನ ಬೋಗಿಗಳ ವಿಲೇವಾರಿ ಕಾರ್ಯ ನಡೆಯುತ್ತಿದೆ.

Previous articleಮಮತಾ ಬ್ಯಾನರ್ಜಿ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು
Next articleಈಶ್ವರಪ್ಪ ಕೆರಳಿದ ಸಿಂಹ