ಕೈ ಲೋಕ ಗ್ಯಾರಂಟಿ ಘೋಷಣೆ

0
14

ಕಲಬುರಗಿ: ಇಲ್ಲಿ ಬುಧವಾರ ನಡೆದ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಯ ಕಹಳೆ ಮೊಳಗಿಸಿತು.
ಸಮಾವೇಶದಲ್ಲಿ ಪಾಲ್ಗೊಂಡ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರದಲ್ಲೂ ಜನಪರ ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ಚುನಾವಣೆಗೆ ನಾವು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಡ್ಡು ಹೊಡೆದರು.
ಯಾವೆಲ್ಲ ಕಾಂಗ್ರೆಸ್ ಗ್ಯಾರಂಟಿಗಳು: ಎನ್‌ಡಿಎ ಸರ್ಕಾರವು ರೈತರ ಬೆಳೆಗಳಿಗೆ ಎಂಎಸ್‌ಪಿ ದರ ಕುರಿತು ಬರಿ ಘೋಷಣೆ ಮಾಡಿದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ದರ ಕಾನೂನು ಬದ್ಧವಾಗಿ ಜಾರಿಗೆ ತರುತ್ತೇವೆ ಎಂದರು.
ಡಿಪ್ಲೊಮಾ, ಪದವೀಧರ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ಖರ್ಚಿನ ಕೌಶಲ್ಯ ತರಬೇತಿ ನೀಡಿಕೆ ಯುವ ನ್ಯಾಯ',ತಲಾ ೧೦ ಕೆಜಿ ಅಕ್ಕಿ ವಿತರಣೆ’, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆದಾಯ ದ್ವಿಗುಣ’, ಸಂಖ್ಯಾಬಲ ಇಲ್ಲದ ಜಾತಿ ಸಮುದಾಯಗಳ ಭಾಗೀದಾರ್ ನ್ಯಾಯ' ಮತ್ತು ಉತ್ತರ ಭಾರತದ ಛತ್ತೀಸಗಢ, ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತಿತರ ರಾಜ್ಯಗಳ ಆದಿವಾಸಿಗಳ ರಕ್ಷಣೆಗೆಆದಿವಾಸಿಗಳ ವಿಶೇಷ ಪ್ಯಾಕೇಜ್’ಗಳನ್ನು ಘೋಷಣೆ ಮಾಡಿದರು.

Previous articleಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್
Next articleಸರ್ಕಾರಿ ಕಟ್ಟಡಗಳಿಗೆ ರಾಜಕಾರಣಿ ಹೆಸರು: ನೋಟಿಸ್