ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್

0
10

ಬೆಂಗಳೂರು: ಗಡುವು ಮುಗಿಯುವುದರೊಳಗೆ ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯ ಎನ್ನುವ ಸೂಚನೆಯನ್ನ ಸರ್ಕಾರ ನೀಡಿದ್ದು, ಫೆಬ್ರವರಿ 28ರವರೆಗೆ ಡೆಡ್​ಲೈನ್ ನೀಡಿದೆ. ಈ ಗಡುವು ಮುಗಿಯಲು 3 ದಿನಗಳಷ್ಟೇ ಬಾಕಿ ಉಳಿದಿದೆ. ಅಷ್ಟರೊಳಗೆ ಕನ್ನಡ ಬೋರ್ಡ್ ಕಡ್ಡಾಯ ಆಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಹೇಳಿದ್ದಾರೆ.

Previous articleಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ದೊಡ್ಡ ಅಪರಾಧ
Next articleಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ