SK Home Ad
Home ತಾಜಾ ಸುದ್ದಿ ಸಣ್ಣ ಹುಡುಗನೊಂದಿಗೆ ಭಾರತ ಜೋಡೋ ಯಾತ್ರೆ

ಸಣ್ಣ ಹುಡುಗನೊಂದಿಗೆ ಭಾರತ ಜೋಡೋ ಯಾತ್ರೆ

0
413
ರಮೇಶ ಜಿಗಜಿಣಗಿ

ವಿಜಯಪುರ: ದೇಶ ಒಡೆದವರು ಕಾಂಗ್ರೆಸ್, ಆದರೆ ಈಗ ಸಣ್ಣ ಹುಡುಗನನ್ನು ಕರೆದುಕೊಂಡು ಭಾರತ ಜೋಡೋ ಯಾತ್ರೆ ನಡೆಸುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದರು.
ವಿಜಯಪುರದದಲ್ಲಿ ಮಾತನಾಡಿದ ಅವರು, 70 ವರ್ಷ ದೇಶವನ್ನು ಲೂಟಿ ಮಾಡಿ ಸತ್ಯಾನಾಶ ಮಾಡಿದ ಕಾಂಗ್ರೆಸ್ ಈಗ ನಾಟಕವಾಡುತ್ತಿದೆ. ಆದರೂ ಮುಗ್ದ ದಲಿತ ಬಾಂಧವರು ಕಾಂಗ್ರೆಸ್ ಬೆನ್ನು ಹತ್ತಿದ್ದಾರೆ. ಕೇವಲ ಚುನಾವಣೆ ಬಂದಾಗ ದಲಿತರನ್ನು ಕಾಂಗ್ರೆಸ್ ನೆನಪು ಮಾಡಿಕೊಳ್ಳುತ್ತದೆ. ಯಾವ ದಲಿತರಿಗೆ ಉಳುಮೆ ಮಾಡಲು ಒಂದು ಇಂಚು ಜಮೀನು ಸಹ ಕಾಂಗ್ರೆಸ್ ನೀಡಿಲ್ಲ. ಆದರೆ ಡಾ. ಅಂಬೇಡ್ಕರ್ ಅವರ ಜೀವನ ಸಂಬಂಧಿಸಿದಂತೆ ಪಂಚ ಕ್ಷೇತ್ರಗಳನ್ನು ಪ್ರಗತಿಗೊಳಿಸಿದ್ದಾರೆ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು. ಈ ವಿಷಯವಾಗಿ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.