Home Advertisement
Home ನಮ್ಮ ಜಿಲ್ಲೆ ಪ್ರೇಮಿಗಳ ದಿನದಂದು ಎಲ್ಲಾ ಚೀಪ್ ಚೀಪ್ ಎಂದ ಉಪ್ಪಿ

ಪ್ರೇಮಿಗಳ ದಿನದಂದು ಎಲ್ಲಾ ಚೀಪ್ ಚೀಪ್ ಎಂದ ಉಪ್ಪಿ

0
100

ನಟ ಉಪೇಂದ್ರ ಅವರ ʼಯುಐʼ ಸಿನಿಮಾ ಪ್ರೇಮಿಗಳ ದಿನದಂದು ಮೊದಲ ಝಲಕ್ ನೀಡಿದೆ.
ಸಾಂಗ್ ಪ್ರೋಮೊ ರಿಲೀಸ್ ಮಾಡಲಾಗಿದ್ದು. ಪ್ರೋಮೊದಲ್ಲೇ ಉಪ್ಪಿ ಸಿನಿರಸಿಕರ ನೀರಿಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಎಲ್ಲಾ ಚೀಪ್ ಚೀಪ್, ನನ್ನದು ತುಂಬಾ ದೊಡ್ಡದು, ಅವನಿಗಿಂತ ನಿನ್ನದು ಚಿಕ್ಕದು.. ಎಂದು ಉಪೇಂದ್ರ ಬರೆದಿರುವ ಸಾಹಿತ್ಯಕ್ಕೆ
ವಿಜಯ್ ಪ್ರಕಾಶ್, ನಕಾಶ್ ಅಜೀಜ್, ದೀಪಕ್ ಬ್ಲೂ ಅವರ ಕಂಠಸಿರಿಯಲ್ಲಿ ಇದೇ ಫೆ.26 ರಂದು ಪೂರ್ತಿ ಹಾಡು ಕೇಳಬಹುದಾಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಪ್ಯಾನ ಇಂಡಿಯಾ ಮಟ್ಟದಲ್ಲಿ ತಯಾರಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆ ನಟನೆಯನ್ನು ಮಾಡಿದ್ದಾರೆ ಉಪ್ಪಿ. ಸುಮಾರು ಏಳೆಂಟು ವರ್ಷಗಳ ನಂತರ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಬರೋಬ್ಬರಿ ಎಂಟು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಲಹರಿ ಸಂಸ್ಥೆ ನಿರ್ಮಾಣದ ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಚಿತ್ರದ ಪ್ರೋಮೊ ಕುರಿತು ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಯು ಐ ಚಿತ್ರದ ~ದುಬಾರಿ~ #ಚೀಪ್ ಸಾಂಗ್ ನ ತುಣುಕು ನಿಮ್ಮ ಮುಂದೆ……
ಸಾಹಿತ್ಯದ ಒಳ ಅರ್ಥ ಡಿಕೋಡ್ ಮಾಡಿ, ಕಾಮೆಂಟ್ ಬಾಕ್ಸ್ ನಿಮ್ಮದೇ..! ಎಂದಿದ್ದಾರೆ.

ಎಲ್ಲಾ ಚೀಪ್ ಚೀಪ್ ಎಂಬ ಹಾಡು ನೀವೊಮ್ಮೆ ನೋಡಿ

Previous article2 ವರ್ಷದ ಕಂದಮ್ಮನೊಂದಿಗೆ ನೇಣಿಗೆ ಶರಣಾದ ತಾಯಿ
Next articleರೈತರ ಹೋರಾಟ ಹತ್ತಿಕ್ಕುತ್ತಿಲ್ಲ