ದಿಲ್ಲಿ ಬಿಡಿ, ಕನ್ನಡಿಗರ ಈ ‘ಎಲ್ಲಿ’ಗಳಿಗೆ ಮೊದಲು ಉತ್ತರ ಕೊಡಿ

0
10

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ನಾಯಕರೇ, ದಿಲ್ಲಿ ಬಿಡಿ, ಕನ್ನಡಿಗರ ಈ ‘ಎಲ್ಲಿ’ಗಳಿಗೆ ಮೊದಲು ಉತ್ತರ ಕೊಡಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಹ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್‌ ಅವರು “ಚಲೋ ದಿಲ್ಲಿ” ಎಂದು ಬೀದಿ ನಾಟಕ ಮಾಡಲು ಹೊರಟಿದ್ದಾರೆ.
ಆದರೆ ಕರ್ನಾಟಕದಲ್ಲಿ… ರೈತರು ಬರ ಪರಿಹಾರ ಎಲ್ಲಿ? ಎನ್ನುತ್ತಿದ್ದಾರೆ. ಅನ್ನದಾತರು ಕಿಸಾನ್‌ ಸಮ್ಮಾನ್‌ ನ 4,000 ರೂ ಎಲ್ಲಿ? ಎಂದು ಕೇಳುತ್ತಿದ್ದಾರೆ. ಹಾಲು ಉತ್ಪಾದಕರು 7 ರೂಪಾಯಿ ಸಹಾಯಧನ ಎಲ್ಲಿ? ಎಂದು ಕೇಳುತ್ತಿದ್ದಾರೆ. ಬಡವರು 10 ಕೆಜಿ ಅಕ್ಕಿ ಎಲ್ಲಿ? ಎಂದು ಕೇಳುತ್ತಿದ್ದಾರೆ. ನಿರುದ್ಯೋಗಿ ಯುವಕರು 3,000 ರೂ. ಎಲ್ಲಿ? ಎಂದು ಕೇಳುತ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ಅನುದಾನ ಎಲ್ಲಿ? ಎಂದು ಶಾಸಕರು ಕೇಳುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ನಾಯಕರೇ, ದಿಲ್ಲಿ ಬಿಡಿ, ಕನ್ನಡಿಗರ ಈ ‘ಎಲ್ಲಿ’ಗಳಿಗೆ ಮೊದಲು ಉತ್ತರ ಕೊಡಿ ಎಂದಿದ್ದಾರೆ.

Previous articleಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಬಿದಿರಿನ ಅಂಗಡಿ
Next articleಅನ್ಯಾಯದ ಬಗ್ಗೆ ರಾಜ್ಯ ಬಜೆಟ್ ಬಳಿಕ ಶ್ವೇತಪತ್ರ