ಬಾಗಲಕೋಟೆ:ರದ್ದಾಗಿದ್ದ ನ್ಯಾಯಬೆಲೆ ಅಂಗಡಿ ಮಾನ್ಯತೆಯನ್ನು ಮರಳಿ ನೀಡಲು ಮಳಿಗೆ ಮಾಲೀಕರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ತಹಶಿಲ್ದಾರ ಕಚೇರಿಯ ಆಹಾರ ವಿಭಾಗದ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ
ಆಹಾರ ನಿರೀಕ್ಷಕ ವೀರಯ್ಯ ಕೋಟಿ ಹಾಗೂ ಮಲ್ಲಿಕಾರ್ಜುನ ಹಾವರಗಿ ಬಲೆಗೆ ಬಿದ್ದಿರುವ ಸಿಬ್ಬಂದಿ.
ವಿದ್ಯಾಗಿರಿಯ ಏಳನೇ ಕ್ರಾಸ್ ನಲ್ಲಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಮಳಿಗೆ ಪುನಾರಂಭಕ್ಕೆ ೬೦ ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಡಿವೈಎಸ್ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಎಚ್.ಬಿದರಿ ನೇತೃತ್ವದ ತಂಡ ಈ ದಾಳಿ ನಡೆಸಿದೆ.