ರಾಜ್ಯದಲ್ಲಿ 35 ಪಾಸಿಟಿವ್

0
27

ಬೆಂಗಳೂರು: ರಾಜ್ಯದಲ್ಲಿ 35 ಜೆಎನ್1 ಪಾಸಿಟಿವ್ ಕಂಡು ಬಂದಿದ್ದು, ಬೆಂಗಳೂರಿನಲ್ಲಿ ಹೆಚ್ಚು ಸಂಖ್ಯೆ ಇದ್ದ ಹಾಗೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಜಿಲ್ಲಾವಾರು ಮಾಹಿತಿ ನೀಡಲಾಗುತ್ತದೆ. ನಾಳೆ ಸಬ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಕುರಿತು ಚರ್ಚೆ ಮಾಡಲಾಗುತ್ತದೆ. ತಜ್ಞರ ಜೊತೆ ಉಪ ಸಮಿತಿ ಸಭೆ ಮಾಡಲಾಗುತ್ತದೆ. ಜೆಎನ್1 ಸೋಂಕಿನ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಜನರು ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸತ್ತವರಲ್ಲಿ ಜೆಎನ್1 ಪತ್ತೆಯಾಗಿದೆ. ಜೆಎನ್1 ಬಗ್ಗೆ ಅಧಿಕೃತ ಮಾಹಿತಿ ತಿಳಿಯಲು ಸ್ಯಾಂಪಲ್ ಕಳುಹಿಸಲಾಗಿತ್ತು. ಸದ್ಯ ಯಾವುದೇ ಮಾರ್ಗಸೂಚಿ ಬರಲ್ಲ. ಹೊಸ ವರ್ಷದ ಆಚರಣೆಗೆ ನಾಳೆಯ ಸಭೆಯ ಬಳಿಕ ತಿಳಿಸುತ್ತೇವೆ. ಸದ್ಯಕ್ಕೆ ಯಾವುದೇ ರೂಲ್ಸ್ ಇಲ್ಲ. ಪಾಸಿಟಿವ್ ಬಂದವರು ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದರು.

Previous articleಆರ್​ಸಿಬಿ ಕನ್ನಡಿಗರನ್ನು ನಿರ್ಲಕ್ಷಿಸುತ್ತಿದೆ
Next articleಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸುವ ಉಸ್ತುವಾರಿ ಕೊಟ್ಟಂತಿದೆ