ಪೊಲೀಸರಿಗೆ ರಾಜ್ಯದಲ್ಲಿ 15 ಸಾವಿರ ಮನೆ ಕಟ್ಟಿದ್ದೇವೆ

0
20

ಚಿಕ್ಕಮಗಳೂರು: ರಾಜ್ಯದಲ್ಲಿ ಪೊಲೀಸರಿಗೆ ಈಗಾಗಲೇ 10 ರಿಂದ 15 ಸಾವಿರ ಮನೆ ಕಟ್ಟಿದ್ದೇವೆ ಅವರು ವಾಸವಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಎಲ್ಲಾ ಪೊಲೀಸರಿಗೂ ಮನೆ ನೀಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು ಅದನ್ನು ಮುಂದುವರಿಸುತ್ತೇವೆ ಎಂದರು. ಈಗಾಗಲೇ ಶೇ.40ರಷ್ಟು ಸಿಬ್ಬಂದಿಗಳಿಗೆ ಮನೆ ನೀಡಿದ್ದೇವೆ. ಶೇ.100ರಷ್ಟು ಸಿಬ್ಬಂದಿಗೆ ಮನೆ ನೀಡಬೇಕೆಂಬುದು ನಮ್ಮ ಉದ್ದೇಶ, ಹಂತ ಹಂತವಾಗಿ ಎಲ್ಲಾ ಪೊಲೀಸರಿಗೂ ಮನೆ ನೀಡುತ್ತೇವೆ ಎಂದರು.

Previous articleವಜ್ರದಲ್ಲಿ ರಾಮಮಂದಿರ
Next articleಜಾತಿ ಜನಗಣತಿ ಜಾರಿ ಪರ ಬಿಜೆಪಿಯ ನಿಲುವು