Home Advertisement
Home ತಾಜಾ ಸುದ್ದಿ ಐದು ಮರಿಗಳಿಗೆ ಜನ್ಮ ನೀಡಿದ ಬಾಡಗಂಡಿ ಮೇಕೆ

ಐದು ಮರಿಗಳಿಗೆ ಜನ್ಮ ನೀಡಿದ ಬಾಡಗಂಡಿ ಮೇಕೆ

0
52

ಬೀಳಗಿ: ತಾಲೂಕಿನ ಬಾಡಗಂಡಿ ಗ್ರಾಮದ ಶೇಖವ್ವ ಶಿವಪ್ಪ ಸುನಗ ಎಂಬುವವರಿಗೆ ಸೇರಿದ ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದ ಅಪರೂಪ ಘಟನೆ ನಡೆದಿದೆ.
ಐದು ಹೆಣ್ಣು ಮರಿಗಳು ಆರೋಗ್ಯದಿಂದ ಇರುವುದು ವಿಶೇಷವಾಗಿದೆ. ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದ ವಿಷಯ ಗ್ರಾಮದ ಜನರಿಗೆ ಮಾತ್ರವಲ್ಲಾ, ಸುತ್ತಮುತ್ತಲಿನ ಗ್ರಾಮದ ಜನರಿಗೂ ಅಚ್ಚರಿ ಮೂಡಿಸಿದೆ.
ಪ್ರತಿಸಲ ೩ ಮರಿಗಳಿಗೆ ಜನ್ಮ ನೀಡುತ್ತಿದ್ದ ಮೇಕೆ ಈ ಬಾರಿ ಐದು ಮರಿಗೆ ಜನ್ಮ ನೀಡಿದೆ. ಇಷ್ಟೊಂದು ಮರಿಗಳಿಗೆ ಜನ್ಮ ನೀಡುವುದು ಅಪರೂಪ. ಸಾಮಾನ್ಯವಾಗಿ ಎರಡು ಮರಿಗಳಿಗೆ ಜನ್ಮ ನೀಡುತ್ತವೆ. ಕೆಲವೊಮ್ಮೆ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದುಂಟು. ಹಾಗೇ ಜನ್ಮ ನೀಡಿದಾಗ ಅದರಲ್ಲೂ ಹೆಣ್ಣು ಮತ್ತು ಗಂಡು ಮರಿಗಳು ಇರುತ್ತವೆ. ಆದರೆ ನಮ್ಮ ಮೇಕೆ ಐದೂ ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು ವಿಶೇಷ ಎಂದು ಶೇಖವ್ವ ಸುನಗ ಸಂತಸ ಹಂಚಿಕೊಂಡರು.

Previous articleಮೈಶಾಳ ಬ್ಯಾರೇಜ್ ಪೂರ್ಣಗೊಂಡರೆ ೭೦೦ ಹಳ್ಳಿಗಳಿಗೆ ಬರ
Next articleಕುಡುಕ ಎನ್ನಬೇಡಿ… ಕುಡಿದು ಸತ್ತರೆ ೧೦ ಲಕ್ಷ ಪರಿಹಾರ ಕೊಡಿ