ಬೆಂಗಳೂರು: ಎರಿಶಾ ಇ ಮೊಬಿಲಿಟಿ ವ್ಯವಸ್ಥಾಪಕ ನಿರ್ದೇಶಕ ದರ್ಶನ್ ರಾಣಾ ಇಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಬೇಟಿಯಾಗಿದ್ದಾರೆ.
ಈ ಕುರಿತು ಸಚಿವ ಎಂ ಬಿ ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾರತದಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಬೈಕ್‌ಗಳು, ತ್ರಿ-ವೀಲರ್‌ಗಳು ಮತ್ತು ಬಸ್ ಗಳ ತಯಾರಿಕಾ ಕಂಪೆನಿಯಾದ #𝐄𝐫𝐢𝐬𝐡𝐚 𝐄 𝐌𝐨𝐛𝐢𝐥𝐢𝐭𝐲 (ಎರಿಶಾ ಇ ಮೊಬಿಲಿಟಿ) ಯ ವ್ಯವಸ್ಥಾಪಕ ನಿರ್ದೇಶಕರಾದ ದರ್ಶನ್ ರಾಣಾ ಹಾಗೂ ಸಂಸ್ಥೆಯ ಪ್ರತಿನಿಧಿಗಳು ಭೇಟಿಮಾಡಿ ರಾಜ್ಯದಲ್ಲಿ ಹೂಡಿಕೆ, ವ್ಯಾಪಾರ ಉತ್ತೇಜನ ಹಾಗೂ ಇನ್ನಿತರೆ ವಿಷಯಗಳ ಕುರಿತು ಚರ್ಚೆ ನಡೆಸಿರುವದಾಗಿ ತಿಳಿಸಿದ್ದಾರೆ.