ಲಾಡ್‌ ಲೆಕ್ಕ ರಿಪೋರ್ಟ್ ಕಾರ್ಡ್ ನಿಮ್ಮ ಮುಂದೆ

0
15

ಬೆಂಗಳೂರು: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅಕ್ಟೋಬರ್ ತಿಂಗಳ ರಿಪೋರ್ಟ್ ಕಾರ್ಡ್‌ ಬಿಡುಗಡೆ ಮಾಡಿದ್ದಾರೆ.
ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ಜನರಿಗೆ ಹೆಚ್ಚೆಚ್ಚು ಉತ್ತರದಾಯಿಯಾಗಲು ರಿಪೋರ್ಟ್ ಬಿಡುಗಡೆಗೊಳಿಸಿರುವ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಕ್ಟೋಬರ್ ತಿಂಗಳ ರಿಪೋರ್ಟ್ ಕಾರ್ಡ್‌ ಬಿಡುಗಡೆ ಮಾಡಿ ಪೋಸ್ಟ್‌ ಮಾಡಿದ್ದಾರೆ “ಒಬ್ಬ ಸಚಿವನಾಗಿ ಏನೇನು ಕೆಲಸ ಮಾಡುತ್ತಿದ್ದೇನೆ? ನಮ್ಮ ಕಾರ್ಮಿಕ ಇಲಾಖೆಯ ಪ್ರಗತಿ ಹೇಗಿದೆ? ನಮ್ಮ ಧಾರವಾಡ ಜಿಲ್ಲಾ ಉಸ್ತುವಾರಿಯಾಗಿ ಏನೆಲ್ಲ ಕಾರ್ಯಗಳಲ್ಲಿ ತೊಡಗಿದ್ದೇನೆ? ಈ ಎಲ್ಲ ಲೆಕ್ಕವನ್ನು ಈ ರಿಪೋರ್ಟ್ ಕಾರ್ಡ್ ಮೂಲಕ ನಿಮ್ಮ ಮುಂದಿಡುತ್ತಿದ್ದೇನೆ. ಇನ್ನು ಪ್ರತಿ ತಿಂಗಳು ಈ ಬಗ್ಗೆ ವರದಿ ಒಪ್ಪಿಸಲಿದ್ದೇನೆ. ಎಂದಿನಂತೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದಿದ್ದಾರೆ.

Previous articleಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಸತ್ತ ಹಾವುಗಳ ಪತ್ತೆ
Next articleಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು