ವಿಶ್ವಾಸ ಇಟ್ಟಿದ್ದೇ ತಪ್ಪಾಯಿತು..

0
21

ಬೆಳಗಾವಿ: ಸಂಬಳಕ್ಕಾಗಿ ಆಗ್ರಹಿಸಿ ಬೆಳಗಾವಿ‌ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಸ್ವಚ್ಚತೆ ಬಂದ್ ಮಾಡಿ ಪ್ರತಿಭಟನೆ ಹಾದಿ‌ ಹಿಡಿದಿದ್ದಾರೆ . ನಾವು ಸಂಬಳ ಕೇಳಿದಾಗಲೊಮ್ಮೆ ನಾಳೆ ಅನ್ನುತ್ತಾರೆ. ಆದರೆ ಸಂಬಳ ಮಾತ್ರ ಕೊಡುತ್ತಿಲ್ಲ. ಇಂದು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಕಸದ ವಾಹನಗಳು ರಸ್ತೆಗೆ ಇಳಿದಿಲ್ಲ. ನಾವು ಪಾಲಿಕೆಯ ಪರಿಸರ ಅಧಿಕಾರಿ ಕಲಾದಗಿ ಅವರನ್ನು ನಂಬಿ ಕೆಟ್ಟಿದ್ದೇವೆ. ಇನ್ನು ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಈಗ ನಮ್ಮ ಖಾತೆ ಗೆ ಸಂಬಳ ಜಮಾ ಆದರೆ ಮಾತ್ರ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಇಲ್ಲಿಯೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ ಎಂದು ಪೌರ ಕಾರ್ಮಿಕರು ಹೇಳಿದರು.

Previous articleಕಾಂಗ್ರೆಸ್ ಅಧಿಕಾರಕ್ಕೇರಿದಾಗ ಇಂಥ ರಾಕ್ಷಸರ ಸಮರ್ಥನೆ ಹೊಸದಲ್ಲ
Next articleಕರ್ತವ್ಯ ಲೋಪ: ತಹಶೀಲ್ದಾರ್‌ ವಿರುದ್ಧ ಎಫ್‌ಐಆರ್