ಇಸ್ರೇಲ್ ನಲ್ಲಿ ರಬಕವಿಯ ಸಾಫ್ಟವೇರ್ ಎಂಜಿನಿಯರ್ ಪೂಜಾ

0
14

ಬಾಗಲಕೋಟ: ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಸಾಫ್ಟವೇರ್ ಎಂಜಿನಿಯರ್ ಪೂಜಾ ಸಂಗಪ್ಪ ಉಮದಿ(ಬಾಣಕಾರ) ಇಸ್ರೇಲ್ ದೇಶದಲ್ಲಿ ಸುರಕ್ಷಿತವಾಗಿದ್ದಾರೆ. ಪೇಠಾಟಿಕ್ವಾರ್ ಎಂಬ ಪ್ರದೇಶದಲ್ಲಿ ವಾಸವಿರುವ ಪೂಜಾ ಟಿಎಸಿಎಸ್ ಕಂಪನಿಯಿಂದ ಎರಡು ವರ್ಷಗಳ ಅವಧಿಗೆ ತೆರಳಿದ್ದಾರೆ.

ಮುಂದಿನ ವರ್ಷದ ಫೇಬ್ರುವರಿಯಲ್ಲಿ ಭಾರತಕ್ಕೆ ಹಿಂದಿರುಗಲಿದ್ದಾರೆ.

ಮಂಗಳವಾರ ಸಂಜೆ ರಬಕವಿಯಲ್ಲಿಯ ತಮ್ಮ ತಂದೆ ತಾಯಿಗಳ ಜತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ, ನಾನು ಆರಾಮಾಗಿದ್ದೇನೆ. ಯಾವುದೆ ಭಯ ಪಡಬೇಡಿ. ಗಾಜಾಪಟ್ಟಿಯಿಂದ ನಾನಿರುವ ಪ್ರದೇಶ ಮೂರು ನೂರು ಕಿ.ಮೀ ದೂರದಲಿರುವ ಪೇಟಾಟಿಕ್ವಾ ನಗರದಲ್ಲಿದ್ದೇನೆ. ಯಾವುದೆ ಸಮಸ್ಯೆ ಇಲ್ಲ. ಎರಡು ತಿಂಗಳಿಗಾಗುವಷ್ಟು ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ.

ಮನೆ ಬಿಟ್ಟು ಹೊರಗಡೆ ಬಾರದಂತೆ ಸೂಚನೆ ನೀಡಿದ್ದಾರೆ. ಸೈರನ್ ಆದ ತಕ್ಷಣ ಆತಂಕವಾಗುತ್ತದೆ ಆದರೂ ಸೈರನ್ ಆದ ತಕ್ಷಣ ಬಂಕರ್ ಗೆ ಹೋಗುತ್ತೇವೆ.

ಪೂಜಾರ ಜತೆಗೆ ಮಂಗಳೂರಿನ ಮತ್ತೊಬ್ಬ ಎಂಜಿನಿಯರ್ ಇದ್ದಾರೆ. ಯಾವುದೆ ರೀತಿಯ ಆತಂಕ ಪಡೆಬೇಡಿ. ನಾವು ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದ್ದೇವೆ ಎಂದು ಮಗಳು ಪೂಜಾ ತಿಳಿಸಿದ್ದಾಳೆ ಎಂದು ಪೂಜಾರ ತಂದೆ ಸಂಗಪ್ಪ ತಿಳಿಸಿದರು.

ನಮ್ಮ ಮಗಳು ಇಸ್ರೇಲ್ ನಲ್ಲಿ ಇದ್ದಾರೆ. ಅವಳು ಯಾವುದೆ ಭಯವಿಲ್ಲ ಎಂದು ಹೇಳುತ್ತಿದ್ದಾಳೆ. ಆದರೂ ನಮಗೆ ಆತಂಕ ಉಂಟಾಗಿದೆ. ನಮ್ಮ ಮಗಳು ಬೇಗನೆ ಬರುವಂತಾಗಲಿ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ತಾಯಿ ನಿರ್ಮಲಾ ಸಂಗಪ್ಪ ಉಮದಿ ಪತ್ರಿಕೆಗೆ ತಿಳಿಸಿದರು.

Previous articleಸಿಎಂ ಮನೆ ಮೇಲೆ ಕಲ್ಲು
Next articleಕ್ಷುಲಕ‌ ಕಾರಣಕ್ಕೆ ಗಲಾಟೆ: ಇಬ್ಬರಿಗೆ‌ ಚಾಕು ಇರಿತ