ಆದಾಯಕ್ಕಾಗಿ ಕುಡಿತವನ್ನು ಬೆಂಬಲಿಸಲು ಸಾಧ್ಯವಿಲ್ಲ

0
11

ಧಾರವಾಡ: ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಾರಾಯಿ ಮಾರಾಟ ಅಡ್ಡಗಾಲು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮದ್ಯದ ಅಂಗಡಿ ಪ್ರಾರಂಭದ ವಿಚಾರವಾಗಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ, ಆರೋಗ್ಯಯುತ ಸಮಾಜ ನಿರ್ಮಾಣವಾಗಬೇಕಾದರೆ ಮದ್ಯದ ಅಂಗಡಿಗಳು ಕಡಿಮೆ ಆಗಬೇಕು. ಸರಕಾರ ಕೂಡ ಮದ್ಯದ ಅಂಗಡಿಯನ್ನು ಕಡಿಮೆ ಮಾಡುವತ್ತ ಗಮನ ಹರಿಸಬೇಕು ಎಂದರು.
ಸಮಾಜದ ಮತ್ತು ಜನರ ಆರೋಗ್ಯಕ್ಕಿಂತ ಸರಕಾರಕ್ಕೆ ಆದಾಯ ಮುಖ್ಯವಲ್ಲ ಎನ್ನುವುದನ್ನು ನಾವೆಲ್ಲರೂ ಅರಿಯಬೇಕು. ಸಾರಾಯಿ ಮಾರಾಟದಿಂದ ಆದಾಯ ಬರುತ್ತದೆ ಎನ್ನುವ ಕಾರಣಕ್ಕಾಗಿ ಕುಡಿತವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದರು.

Previous articleಬಂಗಾರ ತೊಳೆದುಕೊಡುವ ನೆಪದಲ್ಲಿ ನಾಲ್ಕುವರೆ ತೊಲೆ ಆಭರಣ ಕಳ್ಳತನ
Next articleಸರ್ಕಾರಿ ಜಾಗದಲ್ಲಿದ್ದ ಶ್ರೀಗಂಧದ ಮರ ಕಳವು