ಕಾಡಾನೆ ದಾಳಿ: ವ್ಯಕ್ತಿ ಸಾವು

0
15

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದಲ್ಲಿ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ಕಂಚುಕಲ್ಲು ದುರ್ಗಾ ಗ್ರಾಮದ ಕಿನ್ನಿ (60) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಗ್ರಾಮದ ಕಾಡು ದಾರಿಯಲ್ಲಿ ನಡೆದು ಸಾಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಆನೆ ದಾಳಿಯಿಂದ ಕಿನ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಆನೆ ಕಾರ್ಯಪಡೆ ಸ್ಥಾಪನೆಗೊಂಡ ಬಳಿಕ ಕಾಡಾನೆಗಳು ಕಾಫಿ ತೋಟ ದಾಳಿ ಇಟ್ಟು ಬೆಳೆ ನಾಶ ಮಾಡಿರುವ ಘಟನೆಗಳು ನಡೆದಿದ್ದವು.
ಆನೆ ಕಾರ್ಯಪಡೆ ಮನುಷ್ಯ ಮತ್ತು ಪ್ರಾಣಿ ಸಂಘರ್ಷಕ್ಕೆ ತಡೆ ಒಡ್ಡಿತ್ತು. ಈ ನಡುವೆ ಭಾನುವಾರ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿರುವುದು ಮಲೆನಾಡಿಗಳಲ್ಲಿ ಮತ್ತೆ ಕಾಡಾನೆ ಬೀದಿ ಮೂಡಿಸಿದ ಕಳೆದ ವರ್ಷ ಕೇವಲ ಆರು ತಿಂಗಳಿನಲ್ಲಿ ಕಾಡಾನೆಗಳು ಆರು ಜನರ ಬಳಿ ಪಡೆದಿದ್ದವು.

Previous articleಚುನಾವಣೆ ಮುಂದೂಡಿದರೆ ಜನ ಸುಮ್ಮನ್ನಿರಲ್ಲ
Next articleತಮಿಳುನಾಡಿಗೆ ನೀರು: ಕಾವೇರಿ ನದಿ ತೀರದಲ್ಲಿ‌ ಮಕ್ಕಳಿಂದ ಪ್ರತಿಭಟನೆ