ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ

0
17

ಬಾಗಲಕೋಟೆ: ಸಹೋದರರಿಬ್ಬರ ಮೇಲೆ ಏಕಾಏಕಿ ತಲ್ವಾರ್, ಚಾಕುವಿನಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ನಾಪತ್ತೆ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

ವಿದ್ಯಾಗಿರ ಎಂಬಿಎ ಕಾಲೇಜು ಬಳಿ ಬೈಕ್ ಮೇಲೆ ಬಂದ ದುಷ್ಕರ್ಮಿಗಖು ಶರಣಪ್ಪ ಮತ್ತು ವಿಜಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ತಕ್ಷಣ ಇಬ್ಬರನ್ನು ಪ್ರಾಥಮಿಕ ಚಿಕಿತ್ಸೆಗೆ ನವನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳು ಶರಣಪ್ಪ ಹುಬ್ಬಳ್ಳಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಸಹೋದರ ವಿಜಯ ಭೇಟಿಗಾಗಿ ಎಂಬಿಎ ಕಾಲೇಜು ಬಳಿ ತೆರಳಿದ್ದ.ನವನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆಗೆ ಕಾರಣ ತನಿಖೆ ನಂತರವಷ್ಟೇ ತಿಳಿದುಬರಬೇಕಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Previous articleಕಾಡುಕೋಣ ಬೇಟೆ: ಇಬ್ಬರ ಬಂಧನ
Next articleತಲೆ ಸುತ್ತಿ ಬಿದ್ದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ ಗವಿಶ್ರೀ