ಮತ್ತೇ ಸಿಎಂ ಆಗೋ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ

0
27
ಸಿದ್ದರಾಮಯ್ಯ

ಬಾಗಲಕೋಟೆ(ಕುಳಗೇರಿ ಕ್ರಾಸ್): ಮಲಪ್ರಭಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಇನ್ನು ಆರೇಳು ತಿಂಗಳಾದ್ರೆ ನಾವೇ ಮತ್ತೇ ಅಧಿಕಾರಕ್ಕೆ ಬರುತ್ತೆವೆ. ಆಗ ನಿಮ್ಮ ಕೆಲಸ ನಾವೇ ಮಾಡ್ತೀವಿ ತಾಳಿ ಎಂದು ಕಿತ್ತಲಿ ಗ್ರಾಮದಲ್ಲಿ ಮನೆ ಕೇಳಿದ ಸಂತ್ರಸ್ಥರೆದುರು ಮತ್ತೇ ಸಿಎಂ ಆಗೋ ಕನಸು ಬಿಚ್ಚಿಟ್ಟರು.
ನಮಗೆ ಇರಲು ಸೂರಿಲ್ಲ ನಾವು ಕುಟುಂಬ ಸಮೇತ ಬೀದಿಯಲ್ಲಿ ಬಿದ್ದಿದ್ದೇವೆ ನಮಗೆ ಮನೆ ಮಂಜುರು ಮಾಡಿ ಎಂದು ಮನವಿ ಮಾಡಿದ ಗ್ರಾಮಸ್ಥರು. ಸಿಎಂ ಆದ್ರೆ ಪೂರ್ಣ ಗ್ರಾಮ ಶಿಫ್ಟ್ ಮಾಡ್ತಾರೆ ಸುಮ್ಮನಿರೆವ್ವ ಎಂದು ಕಿತ್ತಲಿ ಗ್ರಾಮದ ಅಭಿಮಾನಿ ಮಾತಿಗೆ ಸಿದ್ದರಾಮಯ್ಯ ಹೌದು.. ನಾನು ಸಿಎಂ ಆದ್ರೆ ನಿಮ್ಮ ಪೂರ್ಣ ಗ್ರಾಮ ಶಿಫ್ಟ್ ಮಾಡಿ ಕೊಡ್ತೇನಿ. ಈ ಸರ್ಕಾರಕ್ಕೆ ಸಂತ್ರಸ್ಥರ ಗೋಳು ಕೇಳೋದಿಲ್ಲ, ಜನಪರ ಕೆಲಸವಾಗಲಿ ಜನರಿಗಾಗಿ ಏನೂ ಮಾಡೇ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Previous articleಶಾಂತಿಯುತ ಗಣೇಶೋತ್ಸವ: ಪೊಲೀಸ್‌ ಅಧಿಕಾರಿಗಳಿಗೆ ಸನ್ಮಾನ
Next articleಏಕದಿನ ಕ್ರಿಕೆಟ್‌ಗೆ ಫಿಂಚ್ ವಿದಾಯ