ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು

0
22

ಬೆಂಗಳೂರು: ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅಣಕವಾಡಿದ್ದಾರೆ. ಪ್ರತಿಪಕ್ಷಗಳಿಗೆ ದೇಶ ಕಟ್ಟುವುದಕ್ಕಿಂತ ಅಧಿಕಾರಕ್ಕೆ ಬರುವುದೇ ಏಕೈಕ ಕಾರ್ಯಸೂಚಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು” ದೇಶ ರಕ್ಷಣೆ, ಅಭಿವೃದ್ಧಿ ಹಾಗೂ ಜನಕಲ್ಯಾಣದ ಯಾವ ಚಿಂತನೆಗಳೂ ಇಲ್ಲದ “ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು” ಎಂಬ ಮನೋಸ್ಥಿತಿಯ
ವಿಪಕ್ಷಗಳ ಕೂಟ ‘ಮತ್ತೆ ಮೋದಿ ಜೀ ಪ್ರಧಾನಿಯಾಗಬಾರದು’ ಎಂಬ ಏಕೈಕ ಅಜೆಂಡಾ ಮುಂದಿಟ್ಟುಕೊಂಡು ಒಂದೇ ವೇದಿಕೆಯಲ್ಲಿ ಸೇರುತ್ತಿದೆ.
ಜಾಗತಿಕ ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದು ವಿಶ್ವ ನಾಯಕತ್ವದ ಮುಂಚೂಣಿ ಸ್ಥಾನ ಅಲಂಕರಿಸಿ ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ನೆಲೆ ನಿಂತಿರುವ ಮಾನ್ಯ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿ ಮತ್ತೆ ಆಯ್ಕೆಯಾಗುವುದನ್ನು ಯಾವ ವಿರೋಧಿ ಶಕ್ತಿಯೂ ತಡೆಯಲಾಗದು.” ಎಂದಿದ್ದಾರೆ.

Previous articleಅವಹೇಳನಕಾರಿ ಇನ್​ಸ್ಟಾಗ್ರಾಂ ಪೋಸ್ಟ್​: ಸಂಘರ್ಷ
Next articleಕಾಳಜಿಯ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ