ಗೃಹಲಕ್ಷ್ಮೀ ಯೋಜನೆ: ನಾಲ್ಕೈದು ದಿನದಲ್ಲಿ ಚಾಲನೆ

0
14

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಹೊಸ ಆ್ಯಪ್ ಸಿದ್ದಪಡಿಸಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಆ್ಯಪ್ ಬಿಡುಗಡೆ ಮಾಡಿ ಅರ್ಜಿ ಸ್ವೀಕಾರ ಕಾರ್ಯ ಆರಂಭಿಸಲಾಗುತ್ತದೆ. ಆಗಸ್ಟ್ 16ರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿಯನ್ನು ಇನ್ನೂ ಕರೆದಿಲ್ಲ. ಅರ್ಜಿಯನ್ನೇ ಕರೆದಿಲ್ಲ ಎಂದ ಮೇಲೆ ಸರ್ವರ್ ಡೌನ್ ಪ್ರಶ್ನೆಯೇ ಬರುವುದಿಲ್ಲ. ಸರ್ವರ್ ಡೌನ್ ಆರೋಪವು ನಿರಾಧಾರವಾದುದು ಎಂದು ಹೇಳಿದರು.ಯೋಜನೆಗಾಗಿ ಹೊಸದಾಗಿ ಆ್ಯಪ್ ಸಿದ್ದಪಡಿಸಿದ್ದು, ಅದು ಇನ್ನೂ ಪ್ರಾಯೋಗಿಕ ಪರೀಕ್ಷೆಯಲ್ಲಿದೆ. ಆ್ಯಪ್ ಇನ್ನೂ ರಿಲೀಸ್ ಆಗಿಲ್ಲ. ನಾಲ್ಕೈದು ದಿನದಲ್ಲಿ ಆ್ಯಪ್ ಬಿಡುಗಡೆ ಮಾಡಿ ನಂತರ ಅರ್ಜಿ ಕರೆಯುವ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

Previous articleಸಿದ್ದರಾಮಯ್ಯ ಸರಕಾರ ಕೊಲೆಗಳ ಸರಕಾರ
Next articleಸರ್ಕಾರಿ ವರ್ಗಾವಣೆ ದೇವರ ಕೆಲಸ ಅಲ್ಲ