ತಪ್ಪಿದ ವಿಮಾನ ದುರಂತ: ತುರ್ತು ಭೂ ಸ್ಪರ್ಶ

0
21

ಬೆಂಗಳೂರು: ಹೆಚ್ಎಎಲ್​​ ಏರ್​ಪೋರ್ಟ್​ನಲ್ಲಿ ಮಂಗಳವಾರ ವಿಮಾನ ತುರ್ತು ಭೂಸ್ಪರ್ಶವಾಗಿದೆ ಎಂದು ವರದಿಯಾಗಿದೆ. ಆಪರೇಟಿಂಗ್ ವಿಮಾನ ಟೇಕ್​​ ಆಫ್ ಆದ ನಂತರ ತಾಂತ್ರಿಕ ದೋಷ ಕಂಡ ಹಿನ್ನೆಲೆ ಮತ್ತೆ ಹೆಚ್ಎಎಲ್​​​​ನಲ್ಲೇ ವಿಮಾನ ಲ್ಯಾಂಡ್​​ ಆಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಸುರಕ್ಷಿತವಾಗಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ವಿಮಾನವು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ಹೇಳಲಾಗಿದೆ.

Previous articleಕರ್ನಾಟಕದಲ್ಲಿ ಜಂಗಲ್ ರಾಜ್ ಶುರುವಾಗಿದೆ
Next articleಅಮೋಘ್ ಲೀಲಾ ದಾಸ್‌ಗೆ ಇಸ್ಕಾನ್‌ನಿಂದ 1 ತಿಂಗಳ ನಿಷೇಧ