ಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್ ನಿಧನ

0
9

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್​(90) ಇಂದು ನಿಧನರಾದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಬದುಕು ಉಳಿಯಲಿಲ್ಲ. ಬಾಲನಟನಾಗಿಯೇ ರಂಗಭೂಮಿ ಪ್ರವೇಶಿಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟರು.
‘ಮನೆ ಕಟ್ಟಿ ನೋಡು’ ಸಿನಿಮಾವನ್ನು ನಿರ್ಮಿಸಿದ್ದ ಅವರು ಚಿತ್ರದಲ್ಲಿ ನಾಡಪ್ರಭು ಕೆಂಪೇಗೌಡರ ಮತ್ತು ಬೆಂಗಳೂರಿನ ಕುರಿತಾದ ವಿಶೇಷ ಗೀತೆಯನ್ನು ನೀಡಿದ್ದರು. ಆದರೆ, ಕೆಂಪೇಗೌಡರ ಜನ್ಮದಿನವಾದ ಇಂದು ಅವರು ನಿಧನರಾಗಿದ್ದು ವಿಪರ್ಯಾಸ.

Previous articleವಿಪಕ್ಷ ನಾಯಕನ ಆಯ್ಕೆಗೆ ನಡೆದಿದೆ ಚೌಕಾಶಿ
Next articleಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಆರೋಪಿಗಳ ಮನೆಯಲ್ಲಿ ಎನ್‌ಐಎ ವಿಚಾರಣೆ