ಬಾಗಲಕೋಟೆ: ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

0
9

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ ತಿಳಿಸಲು ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ರಣರಂಗವಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಗೆ ಕಾರಣರಾದ ಪಕ್ಷದ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಶೇಖರ ಮಾನೆ, ಚಂದ್ರಕಾಂತ ಕೇಸನೂರ, ಶಂಭುಗೌಡ ಪಾಟೀಲ ಸೇರಿ ಹಲವರನ್ನು ಸಭೆಯಿಂದ ಹೊರಗೆ ಹಾಕದಿದ್ದರೆ ಪಕ್ಷ ನಿಷ್ಠೆ ತೋರಿದ ಕಾರ್ಯಕರ್ತರು ಹೊರಹೋಗಬೇಕಾಗುತ್ತದೆ ಎಂದು ರಾಜು ರೇವಣಕರ, ರಾಜು ನಾಯ್ಕರ ಸೇರಿ ಹಲವರು ಪಟ್ಟು ಹಿಡಿದರು.
ಆಗ ಮಧ್ಯಪ್ರವೇಶಿಸಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಗದ್ದಲ ಮಾಡದೇ ಕುಳಿತರಷ್ಟೇ ನಾನು ಸಭೆಯಲ್ಲಿರುತ್ತೇನೆ ಸುಮ್ಮನಾಗಿ ಎಂದು ಸಮಾಧಾನಪಡಿಸಲು ಮುಂದಾದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ವೀರಣ್ಣ ಚರಂತಿಮಠ ಅವರು ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ‌ ಮಹಾರಾಜರು, ಜಗಜ್ಯೋತಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ನಮ್ಮ ಅವಧಿಯಲ್ಲಿ ಜಾಗ ಒದಗಿಸಲಾಗಿತ್ತು ಅದರ ಶಂಕಸ್ಥಾಪನೆಯ ಕಲ್ಲು ಇರಿಸಲು ಬಂದಾಗ ವೈದ್ಯಕೀಯ ಪ್ರಕೋಷ್ಠದ ಶೇಖರ್ ಮಾನೆ ಹಾಗೂ ವಿಪ ಸದಸ್ಯ ಪಿ.ಎಚ್.ಪೂಜಾರ ಅವರು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತಂದು ಅದು ಅಕ್ರಮ ಎಂದು ಮಹಾರಾಪುರುಷರ ಮೂರ್ತಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದರು. ನಾವು ಸೋತ ಒಂದೇ ತಿಂಗಳಲ್ಲಿ ನವನಗರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗಿದೆ. ಒಂದು ಕಡೆ ವಿರೋಧಿ ಕೆಲಸ ಮಾಡಿ ಇವರುಗಳು ಪ್ರತಿಭಟನೆಯಲ್ಲೂ ಕಾಣಿಸಿಕೊಳ್ತಾರೆ ಎಂದು ವಾಗ್ದಾಳಿ ನಡೆಸಿದರು.

Previous articleಬೆಳಗಾವಿಗೆ ವಂದೇ ಭಾರತ ರೈಲು ತರಲು ಸಿಡಿದೆದ್ದ ಕರವೇ….!!
Next articleಜುಲೈ 1ರಿಂದ 7ರವರೆಗೆ ರಾಜ್ಯದಾದ್ಯಂತ ವನಮಹೋತ್ಸವ