ಸಣ್ಣದಾಗಿ ಕೆಮ್ಮಿದ್ದಕ್ಕೆ ರೆಸಾರ್ಟ್‌ಗೆ ಓಡಿ ಹೋದರು

0
8

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಯಾರಿಗೂ ಯಾವುದೇ ಟಾಸ್ಕ್ ನೀಡಿರಲಿಲ್ಲ ಎಂದು ವಿಧಾನ ಪರಿಷತ್‌ನ ನೂತನ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು “ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಯಾರಿಗೂ ಯಾವುದೇ ಟಾಸ್ಕ್ ನೀಡಿರಲಿಲ್ಲ, ಕೇವಲ ಶೆಟ್ಟರ್ ಅವರಿಗೆ ಟಾಸ್ಕ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿದವು. ಬಿಜೆಪಿಯಲ್ಲಿನ ಅಸಮಾಧಾನ ಹೆಚ್ಚಾದವು. ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯ ನಾಯಕರು ಪಾಲಿಕೆ ಸದಸ್ಯರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋದರು. ಸಣ್ಣದಾಗಿ ಕೆಮ್ಮಿದ್ದಕ್ಕೆ ರೆಸಾರ್ಟ್‌ಗೆ ಓಡಿ ಹೋದರು ಇನ್ನೂ ದೊಡ್ಡದಾಗಿ ಸದ್ದು ಮಾಡಿದ್ದರೆ ಎಲ್ಲಿಗೆ ಹೋಗುತ್ತಿದ್ದರು ಗೊತ್ತಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಲಿದೆ ಎಂದಿದ್ದಾರೆ.

Previous articleಏಕದೇವೋಪಾಸನೆ
Next articleಉತ್ತಮ ಸಮಾಜಕ್ಕೆ ಯುವ ಶಕ್ತಿಯೇ ಆಧಾರ ಸ್ತಂಭ