ಬಾಗಲಕೋಟೆ: ಅಂಗಡಿಯ ಮೇಲ್ಛಾವಣಿಗ ತಗಡುಗಳನ್ನು ತೆಗೆದು ಒಂದು ಬನಿಯರ್ ಹಾಗೂ ಒಂದು ಸಾವಿರ ರೂಪಾಯಿಯನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬುಧವಾರ ರಾತ್ರಿ ನವನಗರದಲ್ಲಿ ನಡೆದಿದೆ.
ನವನಗರದ ಪೊಲೀಸ್ ಪ್ಯಾಲೇಸ್ ಬಳಿಯಿರುವ ಮಳಿಗೆಗೆ ಕನ್ನ ಹಾಕಿರುವ ಕಳ್ಳರು ೩೫೦ ರೂಪಾಯಿಯ ಒಂದು ಬನಿಯನ್ ಹಾಗೂ ೧ ಸಾವಿರ ರೂ.ಕಳ್ಳತನ ಮಾಡಿದ್ದಾರೆ. ಬಟ್ಟೆ ಅಂಗಡಿ ಪಕ್ಕದ ಸಲೂನ್ ಶಾಪಿಗೂ ಕಳ್ಳರು ನುಗ್ಗಿದ್ದು ಏನೂ ಸಿಗದೆ ಬರಿಗೈಯಲ್ಲಿ ಮರಳಿದ್ದಾರೆ ಎಂದು ತಿಳಿದು ಬಂದಿದೆ. ನವನಗರದ ಪೊಲೀಸ್ ಪ್ಯಾಲೇಸ್ ಬಳಿಯಲ್ಲಿ ಈ ಘಟನೆ ನಡೆದಿದೆ.