ವಿದ್ಯುತ್ ದರ ಏರಿಕೆಗೆ ನಾವು ಒಪ್ಪಿರಲಿಲ್ಲ

0
12
CM

ಬೆಂಗಳೂರು: ವಿದ್ಯುತ್‌ ದರ ಏರಿಕೆಯನ್ನು ಹಿಂದಿನ ಸರ್ಕಾರ ಮಾಡಿದ್ದು ಎಂದು ಆಪಾದನೆ ಮಾಡುತ್ತಿರುವ ಕಾಂಗ್ರೆಸ್‌ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ವಿದ್ಯುತ್‌ ದರ ಏರಿಕೆ ಪ್ರಸ್ತಾವನೆಯನ್ನು ನಮ್ಮ ಸರ್ಕಾರ ಒಪ್ಪಿರಲಿಲ್ಲ. ಜೂನ್‌ 2 ರಂದು ಆದೇಶ ಬಂದಾಗ ರಾಜ್ಯದಲ್ಲಿದ್ದಿದ್ದು ಕಾಂಗ್ರೆಸ್‌ ಸರ್ಕಾರ. ಏಪ್ರಿಲ್‍ನಿಂದ ಪೂರ್ವಾನ್ವಯವಾಗಿ ಇದು ಜಾರಿಯಾಗಿದೆ. ಆದರೂ ನಮ್ಮ ಹಲವು ಆದೇಶಗಳಿಗೆ ತಡೆ ನೀಡಿರುವ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳಕ್ಕೆ ಯಾಕೆ ತಡೆ ನೀಡಬಾರದು” ಎಂದು ಪ್ರಶ್ನಿಸಿದರು. ”ಕರ್ನಾಟಕ ವಿದ್ಯುತ್ ರೆಗ್ಯುಲೇಟರಿ ಸಂಸ್ಥೆ ನಿಮ್ಮಲ್ಲಿ ವಿದ್ಯುತ್ ದರ ಸರಿದೂಗಿಸಿಕೊಂಡು ಹೋಗುವುದನ್ನು ಗಮನಿಸಿಕೊಂಡು ದರ ಹಚ್ಚಳ ಮಾಡುವಂತೆ ಸೂಚಿಸಿದೆ. ಇದಕ್ಕೆ‌ ಎರಡೇ ಆಯ್ಕೆಯಿದೆ. ಒಂದು ರಾಜ್ಯ ಸರ್ಕಾರ ಭರಿಸಬೇಕು ಅಥವಾ ಗ್ರಾಹಕರ ಮೇಲೆ ಹೊರಿಸಬೇಕು. ಕೆಇಆರ್​ಸಿ ಇಂಡಿಪೆಂಡೆಂಟ್ ಬಾಡಿ ಆದರೂ ಸರಿಯಲ್ಲ. ಎರಡೂ ಸರ್ಕಾರ ಇಲ್ಲದಾಗ ದರ ಹೆಚ್ಚಳ ಮಾಡಿದೆ” ತಮ್ಮ ಸುಳ್ಳುಗಳ ಮೂಲಕ ರಾಜ್ಯದ ಜನತೆಯ ಆಶಯಗಳನ್ನು ಹುಸಿಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸುತ್ತೇನೆ ಎಂದಿದ್ದಾರೆ. ‌

Previous articleಪಠ್ಯಕ್ರಮದ ಬದಲಾವಣೆ ಕಿರುಪುಸ್ತಕದ ರೂಪದಲ್ಲಿ
Next articleಮೋದಿ ಕುರುಡರಾಗಿದ್ದಾರಾ?: ರಣದೀಪ್‌ ಸುರ್ಜೇವಾಲಾ