ಅನಗತ್ಯವಾಗಿ ಈ ರೀತಿ ಹೇಳಿ ನುಣುಚಿಕೊಳ್ಳುವ ಕೆಲಸ ಮಾಡಬೇಡಿ: ಸಿದ್ದರಾಮಯ್ಯ

0
32

ಬೆಂಗಳೂರು: ಬೆಂಗಳೂರಿನಲ್ಲಾದ ಮಳೆ ಹಾನಿಗೆ ಹಿಂದಿನ ಸರ್ಕಾರ ಕಾರಣ ಅಂತ ಹೇಳ್ತಾರೆ, ಅನಗತ್ಯವಾಗಿ ಈ ರೀತಿ ಹೇಳಿ ನುಣುಚಿಕೊಳ್ಳುವ ಕೆಲಸ ಮಾಡಬೇಡಿ, ನಾವೇನು ಮಾಡಿದ್ದೇವೆ ಅಂತ ಜನರಿಗೆ ಹೇಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಾದ ಮಳೆ ಹಾನಿ ಬಗ್ಗೆ ಪರೀಶಿಲಿಸಿದ ಸಿದ್ದರಾಮಯ್ಯ ಅವರು, ಇಡೀ ಬೆಂಗಳೂರಿಗೆ ಒಬ್ಬ ಕಮಿಷನರ್ ಮಾತ್ರ ಇರೋದು. ಒತ್ತುವರಿ ತೆರವಿಗೂ ಕೂಡ ವಿರೋಧ ಮಾಡಿದ್ದರು ಇವರು, ನಿಮ್ಮ ಕೆಲಸ ಮಾಡದೇ ನಿಮ್ಮ ವೈಪಲ್ಯ ಮುಚ್ಚಿಕೊಳ್ಳಲು ನಮ್ಮ ಮೇಲೆ ರಾಜ್ಯ ಸರ್ಕಾರ ಮಾತನಾಡುತ್ತಿದೆ.

ಸ್ಥಳೀಯ ಶಾಸಕರು ಎಷ್ಟು ವರ್ಷದಿಂದ ಇದಾರೆ, ಅವರು ಏನು ಮಾಡ್ತಾ ಇದ್ದಾರೆ ಅವರು, ಇದಕ್ಕೆ ಜವಬ್ದಾರಿ ಬಿಜೆಪಿ ಅಲ್ವಾ, ಅವರು ಮೂರು ವರ್ಷದಿಂದ ಏನೂ ಮಾಡಿಲ್ಲ. ಅದಕ್ಕೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಒತ್ತುವರಿ ಮಾಡಲು ಯಾರು ಕಾರಣ ಎಂದು ಸುದೀರ್ಘವಾಗಿ ನಾನು ಅಧಿವೇಶನದಲ್ಲಿ ಪ್ರಸ್ತಾಪ ಮಾಡ್ತೀನಿ, ಯಾರ ಕಾಲದಲ್ಲಿ ಏನು ಆಗಿತ್ತು ಅಂತ ಹೇಳ್ತೀನಿ ಎಂದು ಸಿದ್ದರಾಮಯ್ಯ ಹೇಳಿದರು

Previous articleಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ ಆರಂಭ..!
Next articleಇಲಾಖೆಗಳಲ್ಲಿ ಕನ್ನಡದ ಅನುಷ್ಟಾನ ಕಡ್ಡಾಯವಾಗಿ ಶೇ.100ರಷ್ಟು ಜಾರಿಯಾಗಬೇಕು :ಟಿ.ಎಸ್. ನಾಗಾಭರಣ