ಅಭಿಮಾನಿಗಳಿಗೆ ಕ್ರೇಜಿಸ್ಟಾರ್‌ ನಿರಾಸೆ

0
14

ಬೆಂಗಳೂರು: ಕನ್ನಡ ಚಿತ್ರರಂಗದ ಕನಸುಗಾರ ವಿ. ರವಿಚಂದ್ರನ್ ಅವರಿಗೆ ನಾಳೆ 62ನೇ ಜನ್ಮದಿನದ ಸಂಭ್ರಮ. ಆದರೆ ಈ ಬಾರಿ ಅವರ ಅಭಿಮಾನಿಗಳಿಗೆ ಕ್ರೇಜಿಸ್ಟಾರ್‌ನಿರಾಸೆ ಮಾಡಿದ್ದಾರೆ.
ಹೌದು… ನಾಳೆ ರವಿಚಂದ್ರನ್‌ ತಮ್ಮ ಬೆಂಗಳೂರಿನ ನಿವಾಸದಲ್ಲಿ ಇರುವುದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಅವರ ಮನೆಯ ಮುಂದೆ ಪ್ರತಿ ವರ್ಷ ಸೇರುತ್ತಿದ್ದ ಸಾವಿರಾರು ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದವರಿಗೆ ಸಂಭ್ರಮ ಇಲ್ಲದಂತಾಗಿದೆ.
ಪ್ರತಿ ಬಾರಿ ಅವರ ಜನುಮದಿನದ ಆಚರಣೆಗೆ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ದಾವಣಗೆರೆ ಹೀಗೆ ಹಲವಾರು ಜಿಲ್ಲೆಯ ಅಭಿಮಾನಿಗಳು ದೂರದ ಊರಿನಿಂದ ಬಂದು ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿಯ ಸಂಭ್ರಮಕ್ಕೆ ತಣ್ಣೀರು ಎರಚಿದಂತಾಗಿದೆ. ಇದೆಲ್ಲರ ಮಧ್ಯೆ ರವಿಚಂದ್ರನ್ ತಮ್ಮ ಕನಸಿನ ಬತ್ತಳಿಕೆಯಿಂದ ಮತ್ತೊಂದು ಸಿಹಿ ಸುದ್ದಿ ಕೊಡಲಿದ್ದಾರೆ ಎಂಬುವುದು ವಿಶೇಷ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ರಣಧೀರನಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.

Previous articleಮೈಸೂರು: ಬಸ್‌ ಕಾರು ನಡುವೆ ಭೀಕರ ಅಪಘಾತ
Next articleಸಿಡಿಲಿಗೆ 25 ಕ್ಕೂ ಹೆಚ್ಚು ಮೇಕೆಗಳ ಸಾವು