ಸಚಿವಗಿರಿ ಜೊತೆಗೆ ಮನೆಗೆ ಮಹಾಲಕ್ಷ್ಮೀ

0
13

ಸಚಿವಗಿರಿ ಜೊತೆಗೆ ಮನೆಗೆ ಮಹಾಲಕ್ಷ್ಮೀ ಬಂದಿದ್ದಾರೆ ಎರಡೇ ಎರಡು ಖುಷಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಚಿವ ಸ್ಥಾನದ ಪ್ರಮಾಣವಚನ ಸ್ವೀಕಾರ ನಂತರ ಮಾದ್ಯಮರೊಂದಿಗೆ ಮಾತನಾಡಿದ ಅವರು ಎರಡೇ ಎರಡು ಖುಷಿ ಆಗಿದೆ ಎಂದಿದ್ದಾರೆ.
ಅವರಿಗೆ ಸಚಿವ ಸ್ಥಾನ ದಕ್ಕಿದ ದಿನವೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಜ್ಜಿಯಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್, ಸೊಸೆ ಹಿತಾಗೆ ಹೆಣ್ಣುಮಗು ಜನಿಸಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ, ನಿನ್ನೆ ರಾತ್ರಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿದೆ. ಪುತ್ರ ಮೃಣಾಲ್, ಸೊಸೆ ಹಿತಾಗೆ ಹೆಣ್ಣುಮಗು ಜನಿಸಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಖುಷ್ ಆಗಿದ್ದು, ಸಚಿವಗಿರಿ ಜೊತೆಗೆ ಮನೆಗೆ ಮಹಾಲಕ್ಷ್ಮೀ ಬಂದ ಖುಷಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಳಿಕ ಹೆಬ್ಬಾಳ್ಕರ್ ಕುಟುಂಬ ಬೆಂಗಳೂರಿಂದ ನೇರವಾಗಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ.

Previous articleಬೋಸರಾಜುಗೆ ಒಲಿದ ಸಚಿವ ಸ್ಥಾನ
Next articleಸಾಧನೆ ಅಮರ; ಸಿರಿವಂತಿಕೆ ನಶ್ವರ