ʼಡಿ.ಕೆ. ಸುರೇಶ್‌ ನನಗೆ ವಾರ್ನಿಂಗ್‌ ಮಾಡಿಲ್ಲ, ನಾನೂ ವಾರ್ನಿಂಗ್‌ ಕೊಟ್ಟಿಲ್ಲʼ

0
18

ಡಿಕೆ ಸುರೇಶ್‌ ನನಗೆ ವಾರ್ನಿಂಗ್ ಮಾಡಿಲ್ಲ, ನಾನೂ ಡಿ.ಕೆ. ಸುರೇಶ್‌ಗೆ ವಾರ್ನಿಂಗ್ ಮಾಡಿಲ್ಲ. ಇದನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದು ಸಚಿವ ಎಂ.ಬಿ. ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧ ಕಾರಿಡಾರ್‌ನಲ್ಲಿ ಡಿಕೆ ಸುರೇಶ್ ಹಾಗೂ ಎಂ.ಬಿ.ಪಾಟೀಲ್ ಮುಖಾಮುಖಿ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ವಿಧಾನ‌ಸೌಧದಲ್ಲಿ ಶಾಸಕಾಂಗ ಸಭೆ ಮುಗಿಸಿ ಹೊರಟಿದ್ದೆ ಆಗ ಡಿಕೆ ಸುರೇಶ್ ಪ್ರೀತಿಯಿದ ಎಂ.ಬಿ.ಪಾಟೀಲ್ರೇ ಎಂದು ಕರೆದರು. ನಾನು ವಾಪಸ್ ಬಂದೆ.. ಆಗ ಗಟ್ಟಿಯಾಗಿ ಇರ್ರಿ ಎಂ.ಬಿ. ಪಾಟೀಲ್‌ರೇ ಅಂದ್ರು.. ನಿಮ್ಮ ಜೊತೆ ಆಮೇಲೆ‌ ಮಾತಾಡ್ತೇನೆ ಅಂತ ನಾನು ಹೇಳಿದೆ.. ಇದನ್ನು ಬಿಟ್ಟು ನನಗೆ ವಾರ್ನಿಂಗ್ ಮಾಡಿದರು ಎನ್ನುವುದು ಸುಳ್ಳು ಎಂದು ಹೇಳಿದರು.

Previous articleಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ
Next articleವಿವಾದಾತ್ಮಕ ಹೇಳಿಕೆ ಶಾಸಕ ಪೂಂಜ ವಿರುದ್ಧ ದೂರು