ಹಾದಿ ಬೀದಿಯಲ್ಲಿ ಹೋಗೋರು ವೋಟ್‌ ಹಾಕಿಲ್ವಾ

0
11
ಈಶ್ವರಪ್ಪ

‌ಕಾಂಗ್ರೆಸ್ ಪಕ್ಷ ರಾಜ್ಯದ ಮತದಾರರಿಗೆ ಅವಮಾನ ಮಾಡಿದೆ. ಸಿಎಂ ಮತ್ತು ಡಿಸಿಎಂ ಇಬ್ಬರೂ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕೆಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಯೋಜನೆ ಕೊಡಕ್ಕಾಗಲ್ಲ ಎಂದು ಡಿ.ಕೆ. ಶಿವಕುಮಾರ ಹೇಳುತ್ತಾರೆ. ಮತದಾರರ ಕಾಲಿಗೆ ಬಿದ್ದು ಮತ ಪಡೆದು ಸಿಎಂ ಹಾಗೂ ಡಿಸಿಎಂ ಆಗಿ ಈಗ ಅದೇ ಜನರಿಗೆ ಹಾದಿ ಬೀದಿಯಲ್ಲಿ ಹೋಗುವವರು ಎನ್ನುವುದು ಸರಿಯಲ್ಲ. ಚುನಾವಣೆಗೂ ಮೊದಲು ಎಲ್ಲರಿಗೂ ಉಚಿತ ಎಂದು ಭರವಸೆ ಕೊಟ್ಟು ಈಗ ಈ ರೀತಿ ಮಾತನಾಡುವುದು ಸರಿಯಲ್ಲ. ತಕ್ಷಣವೇ ನೀವು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Previous articleನೂತನ ಸಂಸತ್‌ ಭವನವನ್ನು ಪ್ರಧಾನಿ ಬದಲು ರಾಷ್ಟ್ರಪತಿ ಉದ್ಘಾಟಿಸಲಿ
Next articleಬೆಂಗಳೂರಿನಲ್ಲಿ ಮಳೆಗೆ ಮಹಿಳೆ ಬಲಿ