ನಾರಿ ಶಕ್ತಿ, ನಾಡಿನ ಶಕ್ತಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

0
19

ಬಾಗಲಕೋಟೆ: ಬಾದಾಮಿಯಲ್ಲಿ ನಡೆದ ಬಿಜೆಪಿ ನಾರಿ ಶಕ್ತಿ, ನಾಡಿನ ಶಕ್ತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ೧೦೦ ರೂಪಾಯಿ ಕೊಟ್ಟರೆ ಕೇವಲ ೧೫ ರೂಪಾಯಿ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಅಂದಿನ ಪ್ರಧಾನಿ ರಾಜೀವ ಗಾಂಧಿ ಅವರೇ ಹೇಳಿದ್ದರು ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಪಾರದರ್ಶಕವಾಗಿ ಫಲಾನುಭವಿಗಳ ಖಾತೆಗೆ ಪೂರ್ಣ ಮೊತ್ತ ತಲುಪುತ್ತಿದೆ. ಭ್ರಷ್ಟಾಚಾರದ ಬಾಗಿಲು ಬಂದ್ ಮಾಡಿರುವುದರಿಂದಲೇ ಕಾಂಗ್ರೆಸ್ಸಿನವರು ಮೋದಿಯನ್ನು ನಿಂದಿಸುತ್ತಿದ್ದಾರೆ ಎಂದು ಹೇಳಿದರು.
ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಬಡಿಗ ನಮ್ಮ ಶಕ್ತಿ , ಇಳಕಲ್ ಸೀರೆ, ಗುಳೇದಗುಡ್ಡ ಖಣಕ್ಕೂ ಕೇಂದ್ರ ಸರ್ಕಾರ ಮಹತ್ವ ನೀಡಿದೆ, ಕರ್ನಾಟಕದ ಕಬೀರ ಇಬ್ರಾಹಿಂ ಸುತಾರಾ ಅವರಿಗೆ ಪದ್ಮ ನೀಡಿ ಗೌರವಿಸಿದೆ. ಕಾಂಗ್ರೆಸ್ ನಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಈ ಬಾರಿ ನಿರ್ಧಾರ ಬಿಜೆಪಿಯ ಬಹುಮತದ ಬಿಜೆಪಿ ಸರ್ಕಾರ ಎಂದು ಘೋಷಣೆಯನ್ನು ಭಾಷಣದುದ್ಧಕ್ಕೂ ಬಳಸಿದ ಅವರು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರವೇ ಕರ್ನಾಟಕ ದೇಶದ ನಂ.೧ ಆಗಬಹದೂ ಎಂದು ಹೇಳಿದರು.

Previous articleಅಧಿಕಾರಕ್ಕೆ ಬಂದ ಮೊದಲ ದಿನವೇ ಐದು ಗ್ಯಾರಂಟಿ ಜಾರಿ
Next articleಖರ್ಗೆ ಆಪ್ತನ ಮನೆ ಮೇಲೆ ಐಟಿ ದಾಳಿ