ಕೌಟುಂಬಿಕ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯ

0
12

ಬೆಳಗಾವಿ: ಕೌಟಂಬಿಕ ಕಲಹದಿಂದಾಗಿ ಪತಿಯು ತನ್ನ ಪತ್ನಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.
ಸುಜಾತಾ ಆಶೋಕ(45) ಎಂಬುವರೇ ಹಲ್ಲೆಯಿಂದ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಪಾತ್ರೆಗಳನ್ನು ತೊಳೆಯುವ ಸಂದರ್ಭದಲ್ಲಿ ಪತಿ ಆಶೋಕ (ಕುಡುಗೋಲಿನಿಂದ) ಮಾರಕಾಸ್ತದಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಸುಜಾತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೊಲೆ ಮಾಡಿದ ಪತಿ ಆಶೋಕ ಸದಲಗಾ ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬಿಜೆಪಿ ಕರ್ನಾಟಕವನ್ನು ಲೂಟಿ ಮಾಡಿದೆ
Next articleಆಂಜನೇಯನ ಭಕ್ತ ಅಂತ ಹೇಳಿಕೊಂಡರೆ ಸಾಲದು