ಕತ್ತಿ ಕುಟುಂಬದೊಂದಿಗೆ ಮೂರು ತಲೆಮಾರಿನ ಒಡನಾಟ

0
9
ಬೊಮ್ಮಾಯಿ

ಹುಕ್ಕೇರಿ: ಉಮೇಶ್ ಕತ್ತಿ ನಮ್ಮ ಜೊತೆ ಇಲ್ಲ. ಅವರು ಸ್ವರ್ಗದಿಂದಲೇ ನಿಖಿಲ್ ಕತ್ತಿಗೆ, ರಮೇಶ್ ಕತ್ತಿಗೆ ಆಶೀರ್ವಾದ ಮಾಡುತ್ತಿದ್ದಾರೆ. ನೀವೂ ಇವರಿಗೆ ಆಶೀರ್ವಾದ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹುಕ್ಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಪರ ರೋಡ್ ಶೋ ನಡೆಸಿ ಮಾತನಾಡಿದರು. ಉಮೇಶ್ ಕತ್ತಿ ಅವರು ಸೋಲಿಲ್ಲದ ಸರದಾರ ಆಗಿದ್ದರು. ವಿಶ್ವನಾಥ್ ಕತ್ತಿಯವರ ಆಕಸ್ಮಿಕ ಸಾವಿನಿಂದ ಉಮೇಶ್ ಕತ್ತಿ ಅವರಿಗೆ ವಿಧಾನ ಸಭೆಗೆ ಪ್ರವೇಶಿಸುವ ಅನಿವಾರ್ಯವಾಗಿ ಸಂದರ್ಭ ಇತ್ತು. ಒಂಬತ್ತು ಬಾರಿ ನಿರಂತರವಾಗಿ ಹುಕ್ಕೇರಿಯನ್ನು ಪ್ರತಿನಿಧಿಸಿ ವಿಧಾನಸಭೆಗೆ ಆಯ್ಕೆ ಆಗಿದ್ದರು. ನಿಮ್ಮೆಲ್ಲರ ಆಶೀರ್ವಾದದಿಂದ ಅವರು ಹಿಂತಿರುಗಿ ನೋಡಲಿಲ್ಲ. ಹುಕ್ಕೇರಿ ಅಭಿವೃದ್ಧಿಗೆ ಕಂಕಣ ಕಟ್ಟಿಕೊಂಡು ನಿರಂತವಾಗಿ ಶ್ರಮಿಸಿದರು. ಯಾವುದೇ ಖಾತೆ ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸಿದವರು ಉಮೇಶ್ ಕತ್ತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

Previous articleಡಬಲ್ ಎಂಜಿನ್ ಸರಕಾರ ಇರುವಲ್ಲೆಲ್ಲ ನಿರಂತರ ಅಭಿವೃದ್ಧಿ
Next articleರಾಹುಲ್, ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬಂದಷ್ಟು ನಮಗೆ ಲಾಭ