ಒಂದು ಲಕ್ಷ ಜನ ಸೇರಿಸಿ ಸಮಾವೇಶ ನಡೆಸುತ್ತೇವೆ :ಬಿಎಸ್​ ಯಡಿಯೂರಪ್ಪ…

0
46

ಶಿವಮೊಗ್ಗ : ಶಿವಮೊಗ್ಗದಲ್ಲಿ ಪ್ರಧಾನಿ ಮೋದಿಯವರನ್ನು ಕರೆಯಿಸಿ ಒಂದು ಲಕ್ಷ ಜನ ಸೇರಿಸಿ ಸಮಾವೇಶ ನಡೆಸುತ್ತೇವೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ಧಾರೆ.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಾತನಾಡಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿ ಮೋದಿಗೆ ಅಮಿತ್ ಶಾಗೆ ನಡ್ಡಾರವರಿಗೆ ಅಭಿನಂದಿಸುವೆ ಎಂದಿದ್ಧಾರೆ.
ಮೋದಿಯವರಿಗೂ ಕರ್ನಾಟಕದಲ್ಲಿ ಬಿಜೆಪಿಯನ್ನು ಮರು ಆಡಳಿತ ತರಬೇಕೆಂಬ ಆಸೆಯಿದೆ. ಎಲ್ಲರೊಂದಿಗೂ ಮಾತನಾಡಿ ಎಲ್ಲರೂ ಒಪ್ಪಿದ್ದಲ್ಲಿ ಶೀಘ್ರದಲ್ಲಿಯೇ ಸಮಾವೇಶದ ದಿನಾಂಕ ನಿಗದಿಪಡಿಸುತ್ತೇವೆ. ಶಿವಮೊಗ್ಗದಲ್ಲಿ ನಡೆಯುವ ಬಿಜೆಪಿ ಸಮಾವೇಶಕ್ಕೆ ಒಂದು ಲಕ್ಷ ಜನ ಸೇರಿಸಿ ಆ ಸಮಾವೇಶಕ್ಕೆ ಪ್ರಧಾನಿ ಮೋದಿಯನ್ನ ಕರೆಯಿಸಲಾಗುವುದು. ಪ್ರಧಾನಿಯವರೆ ಖುದ್ದಾಗಿ ತಿಂಗಳಿಗೊಮ್ಮೆ ಬರುವುದಾಗಿ ಹೇಳಿರುವುದರಿಂದ ಅವರನ್ನ ಕರೆಯಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ಧಾರೆ.

Previous articleಮುರುಘಾಶ್ರೀಗಳಿಗೆ ಮತ್ತೆ ಮೆಡಿಕಲ್​ ಟೆಸ್ಟ್
Next articleವಿಚಾರಣೆ ವೇಳೆ ಮೌನಕ್ಕೆ ಶರಣಾದ ಮುರುಘಾಶ್ರೀ..!