ಹಿರೇಕೆರೂರ: ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶರಣರ ವಚನಗಳು, ಅವರು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಂಸ್ಕಾರ, ಸನ್ನಡತೆಯಿಂದ ಬದುಕಿದ ರೀತಿ ತಿಳಿಸಿಕೊಡುವುದೇ ಈ ಶ್ರಾವಣ ಸಂಜೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಹೇಳಿದರು.
ತಾಲೂಕಿನ ದೂದೀಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸಂಕೀರ್ಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಿರೇಕೆರೂರ ಹಾಗೂ ವಸತಿ ಶಾಲೆಯ ಆಶ್ರಯದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಮಹೇಂದ್ರ ಬಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಾಚಾರ್ಯರಾದ ಮುಸ್ತುಫಾ ಡಿ.ಎಸ್., ರ‍್ಯಾ ನಾಯಕ್, ಕಸಾಪ ಪದಾಧಿಕಾರಿಗಳಾದ ಬಿ.ಟಿ. ಚಿಂದಿ, ಪಿ.ಬಿ. ನಿಂಗನಗೌಡ್ರ, ಎಂ.ಎಂ. ಮತ್ತೂರ, ಪಿ.ಎಸ್. ಸಾಲಿ ಬಿ.ಎಸ್. ಪಾಟೀಲ, ಸಿ.ಬಿ. ಮಾಳಗಿ, ಗೀತಾ ಸಾಲಿಮಠ, ವೀರಣ್ಣ ಚಿಟ್ಟೂರ, ಹೂವಪ್ಪ ವಡ್ಡಿನಕಟ್ಟಿ ಇದ್ದರು.



























