ನನಗೆ ಯಾರ ಮೇಲೂ ಅಸಮಾಧಾನ ಇಲ್ಲ; ಎಸ್. ಆರ್. ಪಾಟೀಲ್…

ಬೆಂಗಳೂರು: ನನಗೆ ಯಾರ ಮೇಲೂ ಅಸಮಾಧಾನ ಇಲ್ಲ, ಹೀಗಾಗಿ ಅಸಮಾಧಾನ ಶಮನ ಆಯ್ತಾ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಎಸ್. ಆರ್. ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಎಸ್. ಆರ್. ಪಾಟೀಲ್ ಅವರು ನನಗೆ ಎರಡು ಬಾರಿ ಟಿಕೆಟ್ ತಪ್ಪಿತು. ನಾನು ಸಿದ್ದರಾಮಯ್ಯ, ಡಿಕೆಶಿವಕುಮಾರ್, ಹೈಕಮಾಂಡ್ ಯಾರ ಮೇಲೂ ದೋಷಾರೋಪಣೆ ಮಾಡಿಲ್ಲ. ಪಕ್ಷದಲ್ಲಿ ಯಾರು ಎಲ್ಲಿಯೇ ನಿಲ್ಲಲಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೊಡೋದು ನನ್ನ ಜವಾಬ್ದಾರಿ. ನನಗೆ ಅಸಮಾಧಾನವೇ ಇಲ್ಲ, ಹೀಗಾಗಿ ಶಮನ ಆಯ್ತಾ ಎನ್ನೋ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯ ಸಹೋದರ ನಿಧನಕ್ಕೆ ಸಾಂತ್ವನ ಹೇಳಲು ಬಂದಿದ್ದೆ ಅಷ್ಟೇ ಎಂದು ತಿಳಿಸಿದ್ದಾರೆ.